ಕಾರ್ಕಳ: ಜೂಜು ಅಡ್ಡೆಗೆ ದಾಳಿ-ಇಬ್ಬರು ಯುವಕರ ಬಂಧನ, ಮೂವರು ಪರಾರಿ
ಕಾರ್ಕಳ: ಜೋಡುಕಟ್ಟೆ ಸಾರ್ವಜನಿಕ ಬಸ್ಸು ನಿಲ್ದಾಣದ ಹಿಂಬದಿಯ ಜೂಜು ಕೇಂದ್ರಕ್ಕೆ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದ ವೇಳೆ ಮೂವರು ಪರಾರಿಯಾಗಿದ್ದು, ಇಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.
ನಗರ ಠಾಣಾಧಿಕಾರಿ ಮಧು ಬಿ.ಇ ನೇತೃತ್ವದ ಪೊಲೀಸರ ತಂಡವು ಖಚಿತ ವರ್ತಮಾನದ ಮೇರೆಗೆ ಈ ಕಾರ್ಯಚರಣೆ ನಡೆಸಿದ್ದು, ಪೆರ್ವಾಜೆ ಎನ್.ಆರ್.ರೋಡ್ನ ನಿವಾಸಿ ಸಮರ್ಥ್ (22), ಮಿಯ್ಯಾರು ಜೋಡುಕಟ್ಟೆ ಬಲಿಪರಪಾಡಿಯ ನಿವಾಸಿ ಸುಧೀರ್(30) ಎಂಬರನ್ನು ಬಂಧಿಸಿದ್ದಾರೆ.
ಇನ್ನು ಆರೋಪಿಗಳು ಜೂಜಿಗಾಗಿ ಪಣವನ್ನಾಗಿಟ್ಟ ನಗದು ರೂ. 3130 , 52 ಇಸ್ಪೀಟ್ ಎಲೆಗಳು, ಹಳೆಯ ದಿನಪತ್ರಿಕೆಯೊಂದು, 2 ಕಾರುಗಳನ್ನು ಸ್ವಾಧೀನಪಡಿಸಿದ್ದಾರೆ. ಕಾರುಗಳ ಒಟ್ಟು ಮೌಲ್ಯ 10,00,000 ಆಗಿರುತ್ತದೆ.ಈ ಬಗ್ಗೆ ನಗರದ ಠಾಣೆಯಲ್ಲಿ ಕೇಸು ದಾಖಲಾಗಿದೆ.