ಉಡುಪಿ: ನಗರ ಮತ್ತು ಗ್ರಾಮಂತರ ಯೋಜನಾ ಇಲಾಖೆಯ ಸಿಬಂದಿ ಕೋವಿಡ್ ಸೋಂಕಿಗೆ ಬಲಿ
ಉಡುಪಿ: ನಗರ ಮತ್ತು ಗ್ರಾಮಂತರ ಯೋಜನಾ ಇಲಾಖೆಯ ಸಿಬಂದಿ ಕೋವಿಡ್ ಸೋಂಕಿಗೆ ಶನಿವಾರ ಮುಂಜಾನೆ ಬಲಿಯಾಗಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ನಗರ ಮತ್ತು ಗ್ರಾಮಂತರ ಯೋಜನಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತಿದ್ದ ಇಂದ್ರಾಳಿ ನಿವಾಸಿ ರಾಘವೇಂದ್ರ ಅವರು ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೆ ಇಂದು ಅಜ್ಜರಕಾಡಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಳೆದ ಐದು ದಿನಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ರಾಘವೇಂದ್ರ ನಿಧನಕ್ಕೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ .ರಾಘವೇಂದ್ರ ಕಿಣಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.