ಕುಂದಾಪುರ: ಮಾವಿನಕಟ್ಟೆ ಸರ್ಕಲ್ನಿಂದ ನೇರಳಕಟ್ಟೆವರೆಗೆ ಮೇ1 ರಿಂದ ವಾಹನ ಸಂಚಾರ ಸ್ಥಗಿತ-ಜಿಲ್ಲಾಧಿಕಾರಿ
ಉಡುಪಿ ಎ. 30: ಸೌಕೂರು ಏತ ನೀರಾವರಿ ಕಾಮಗಾರಿಯಲ್ಲಿ ಪೈಪ್ಲೈನ್ ಲೇಯಿಂಗ್ ಕಾಮಗಾರಿಯನ್ನು ಕೈಗೊಳ್ಳಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989 ರ ಕಲಂ 221(ಎ)(2) & (5) ರನ್ವಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಸರ್ಕಲ್ನಿಂದ ನೇರಳಕಟ್ಟೆ ಸರ್ಕಲ್ವರೆಗೆ ಮೇ 1 ರಿಂದ ಮೇ 11 ರ ವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ವಾಹನಗಳ ಪರ್ಯಾಯ ಮಾರ್ಗ: ಅಂಪಾರು-ನೇರಳಕಟ್ಟೆ-ನೆAಪು-ಹೆಮ್ಮಾಡಿ ಮಾರ್ಗವಾಗಿ ಹಾಗೂ ಕಂಡ್ಲೂರು-ಗುಲ್ವಾಡಿ-
ಮಾವಿನಕಟ್ಟೆ-ಹಟ್ಟಿಯAಗಡಿ-ತಲ್ಲೂರು-ಹೆಮ್ಮಾಡಿ ಮಾರ್ಗವಾಗಿ ತಲುಪುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.