ಕಾಪು: ಸಾಂತೂರಿನ ಮಹಿಳೆ ನಾಪತ್ತೆ
ಪಡುಬಿದ್ರೆ, ಎ,30 (ಉಡುಪಿ ಟೈಮ್ಸ್ ವರದಿ): ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಕಾಪುವಿನ ಸಾಂತೂರ ಗ್ರಾಮದ ಬಾಳೆಗುಂಡಿ ಹೌಸ್ ಎಂಬಲ್ಲಿ ನಡೆದಿದೆ. ಹೆಲೆನ್ ಡಿಸೋಜ (65) ನಾಪತ್ತೆಯಾದವರು.
ಇವರು ಸ್ವಲ್ಪ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕೃಷಿ ತೋಟ ಕೆಲಸ ಮಾಡಿಕೊಂಡಿದ್ದರು. ಎ.15 ರಂದು ಬೆಳಿಗ್ಗೆ 8.30 ರ ವೇಳೆಗೆ ತೋಟಕ್ಕೆ ಹೋಗಿ ಮನೆಗೆ ಬಂದವರು ಬಳಿಕ ಮನೆಯಿಂದ ಹೇಳದೇ ಎಲ್ಲಿಗೋ ಹೋಗಿದ್ದಾರೆ. ಅದೇ ದಿನ 10 ಗಂಟೆ ವೇಳೆಗೆ ಮನೆಯಿಂದ ಅರ್ಧಕಿ.ಮೀ ದೂರದಲ್ಲಿರುವ ಗ್ರೇಟ್ಟಾ ಅಲ್ಮೇಡರವರು , ಹೆಲೆನ್ ಡಿಸೋಜ ಅವರು ಬ್ಯಾಗ್ ಹಿಡಿದುಕೊಂಡು ಸಾಂತೂರು ಬಸ್ನಿಲ್ದಾಣದ ಕಡೆಗೆ ಹೋಗುವುದನ್ನು ನೋಡಿರುವುದಾಗಿ ತಿಳಿಸಿದ್ದರು. ಆದರೆ ಅವರು ಈ ವರೆಗೂ ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.