ಹಿಂದೂ ಸಂಘಟನೆಯ ಮುಖಂಡ, ಯುವ ಉದ್ಯಮಿಯ ಹತ್ಯೆ- ಕಾರಣ ನಿಗೂಢ
ಬೆಳ್ತಂಗಡಿ, ಏ.30(ಉಡುಪಿ ಟೈಮ್ಸ್ ವರದಿ): ಬೆಳ್ತಂಗಡಿ ಮೂಲದ ಯುವ ಉದ್ಯಮಿಯನ್ನು ಶಿರಸಿಯಲ್ಲಿ ಹತ್ಯೆ ಮಾಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ಬೆಳ್ತಂಗಡಿಯ ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಸುದರ್ಶನ್ ಅಲಿಯಾಸ್ ಹರ್ಷ ರಾಣೆ (36) ಕೊಲೆಯಾದ ಯುವ ಉದ್ಯಮಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಮುಂಡಗೋಡದ ಬಡ್ಡಿಗೇರಿಯಲ್ಲಿ ಏ. 29 ರಂದು ಸಂಜೆ, ಬಡ್ಡಿಗೇರಿಯಲ್ಲಿ ಬೈಕ್ ನಲ್ಲಿ ಸುದರ್ಶನ್ ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಹತ್ಯೆ ಗೆ ನಿಖರ ಕಾರಣ ತಿಳಿದುಬಂದಿಲ್ಲ, ಘಟನೆಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುದರ್ಶನ್ ಮಂಗಳೂರು, ಶಿರಸಿ ಮುಂತಾದೆಡೆ ವ್ಯವಹಾರ ಹೊಂದಿದ್ದು, ತಮ್ಮ ಕುಟುಂಬದೊಂದಿಗೆ ಧಾರವಾಡದಲ್ಲಿ ಮೂರು ವರ್ಷಗಳ ಕಾಲ ವಾಸವಾಗಿದ್ದರು. ವಿವಾಹಿತರಾಗಿರುವ ಇವರಿಗೆ ಒಂದು ವರ್ಷ ಮಗುವಿದೆ. ಇವರು ಹಿಂದೂ ಸಂಘಟನೆಗಳಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.