ಭಾರತ್ ಪ್ರೆಸ್ ಮಾಲಕ, ಜನ ಸಂಘದ ಪ್ರಪ್ರಥಮ ಉಡುಪಿ ಪುರಸಭಾ ಸದಸ್ಯ ದೇವದಾಸ್ ಪೈ ನಿಧನ

ಉಡುಪಿ ಎ.29(ಉಡುಪಿ ಟೈಮ್ಸ್ ವರದಿ): ಉಡುಪಿಯ ಕಲ್ಸಂಕ ನಿವಾಸಿ ಭಾರತ್ ಪ್ರೆಸ್ ಮಾಲಕರಾದ ಟಿ. ದೇವದಾಸ್ ಪೈ ಅವರು ಇಂದು ನಿಧನರಾಗಿದ್ದಾರೆ. 86 ವರ್ಷದ ಇವರು ಇಂದು ತಮ್ಮ  ಸ್ವಗ್ರಹದಲ್ಲಿ ವಿಧಿವಶರಾಗಿದ್ದಾರೆ.

ಇವರು ಐವರು ಪುತ್ರಿಯರು, ಓರ್ವ ಪುತ್ರರನ್ನು ಅಗಲಿದ್ದಾರೆ. ಇವರು ಸಾಮಾಜಿಕ ಹಾಗೂ ಧಾರ್ಮಿಕ ಹಿತ ಚಿಂತಕರು ಆಗಿ ಸೇವೆ ಸಲ್ಲಿಸಿದ್ದು, ಹಿರಿಯ RSS ದುರೀಣರಾಗಿದ್ದಾರೆ.

ಜನ ಸಂಘದಿಂದ ಸ್ಪರ್ದಿಸಿ ಪ್ರಪ್ರಥಮ ಉಡುಪಿ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವರು ಶ್ರೀಮಹಾಲಸಾ ನಾರಾಯಣ ದೇವಸ್ಥಾನ ಗೋವಾ, ಶ್ರೀವೀರವಿಠಲ್ ದೇವಸ್ಥಾನ ಭದ್ರಗಿರಿ, ಶ್ರೀಮಹಾಲಸಾ ನಾರಾಯಣ ದೇವಸ್ಥಾನ ಶಿರ್ವ, ಶ್ರೀವೆಂಕಟರಮಣ ದೇವಸ್ಥಾನ ಕಲ್ಯಾಣಪುರ, ಶ್ರೀ ಮಹಾಲಸಾ ನಾರಾಯಣ ದೇವಸ್ಥಾನ ಬಸ್ರೂರು, ಶ್ರೀನಿತ್ಯಾನಂದ ಸ್ವಾಮಿ ಮಠ ಉಡುಪಿ , ಇದರ  ಆಡಳಿತ ಮಂಡಳಿಯ ಸದಸ್ಯರಾಗಿ ಹಲವು ವರ್ಷಗಳ ಕಾಲ ಸೇವೆ ನೀಡಿದ್ದರು.

ತೋನ್ಸೆ ಪೈ ಫ್ಯಾಮಿಲಿ  ಟ್ರಸ್ಟ್ ನ  ಮುಖ್ಯ ರೂವಾರಿ ಹಲವಾರು ಧಾರ್ಮಿಕ, ಸಾಮಾಜಿಕ ಕಾರ್ಯನಿರಂತರವಾಗಿ ನೆಡೆಸಿಕೊಂಡು ಬಂದಿದ್ದರು. ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸ್ಥಾಪಕ ಸದಸ್ಯರಾಗಿ, ಸಮಾಜ ಸೇವೆ, ಹರಿಗುರು ಸೇವೆ ನೀಡಿ ಜಿಎಸ್ ಬಿ  ಸಮಾಜ ಹಾಗೂ ಇತರ ಸಂಘಟನೆಗಳಿಂದ ಹಲವು ಸನ್ಮಾನ ಪುರಸ್ಕಾರ ಪಡೆದಿದ್ದರು.

ಉಡುಪಿ ನಗರಸಭೆಯ ಸ್ಥಾಪಕ ಸದಸ್ಯರಾದ ಟಿ. ದೇವದಾಸ್ ಪೈ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ ನಾಯಕ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 60 ದಿನಗಳ ಕಾಲ ಸೆರೆವಾಸವನ್ನು ಅನುಭವಿಸಿದ್ದರು. ಸದಾ ಹಸನ್ಮುಖಿಯಾಗಿದ್ದ ಅವರು ಎಲ್ಲರೊಂದಿಗೆ ಆತ್ಮೀಯ ಭಾವವನ್ನು ಹೊಂದಿದ್ದರು. ಹಿಂದಿನ ಗುಂಡಿಬೈಲು ಶಾಲೆ ಮತ್ತು ಕಲ್ಯಾಣಪುರ ಡಾ. ಟಿ.ಎಂ.ಎ. ಪೈ ಪ್ರೌಢಶಾಲೆಯ ಅಭಿವೃದ್ಧಿ ಸಮಿತಿಯಲ್ಲಿ ಸಕ್ರಿಯರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು. ಧಾರ್ಮಿಕ ಸಾಮಾಜಿಕ ಮತ್ತು ರಾಷ್ಟ್ರೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿರುವ ಕುಯಿಲಾಡಿ  ಅವರ ಕುಟುಂಬಸ್ಥರಿಗೆ ಅವರ ಆಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!