ಕುಂದಾಪುರ:ಮುಂದುವರಿದ ಆಶಾ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯ

ಕುಂದಾಪುರ: ಆಶಾ ಕಾರ್ಯಕರ್ತೆಯೊರ್ವರು ಬೀಜಾಡಿಯ ಮನೆಯೊಂದಕ್ಕೆ ಹೋಗಿದ್ದ ಸಂದರ್ಭ ದಂಪತಿಗಳಿಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡಿದ ಘಟನೆ ಕುಂದಾಪುರ ತಾಲೂಕಿನ ಬೀಜಾಡಿ ಎಂಬಲ್ಲಿ ಗುರುವಾರ ನಡೆದಿದೆ.


ಆಶಾ ಕಾರ್ಯಕರ್ತೆ ಸರೋಜಾ ಅವರು ಬೀಜಾಡಿಯ ಅನಂತ ಕಾಮತ್ ಮನೆಗೆ ಹೋಗಿ ಆರೋಗ್ಯದ ಮಾಹಿತಿ ವಿಚಾರಿಸುತ್ತಿದ್ದಾಗ ಕಾಮತ್ ಹಾಗು ಅವರ ಪತ್ನಿ ಗೀತಾ ಕಾಮತ್ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಕೈಯಲ್ಲಿದ್ದ ರೆಕಾರ್ಡ್ ಬುಕ್ ಕಸಿಯಲು ಯತ್ನಿಸಿ ಹಲ್ಲೆಗೆ ಮುಂದಾಗಿದ್ದಾರೆ.

ಇದರಿಂದ ಗೊಂದಲಗೊಂಡ ಆಶಾ ಕಾರ್ಯಕರ್ತೆ ಉನ್ನತ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ನಂತರ ಈ ಬಗ್ಗೆ ಆಶಾ ಕಾರ್ಯಕರ್ತೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಈ ಹಿಂದೆಯೂ ಆಶಾ ಕಾರ್ಯಕರ್ತೆಯರ ಜೊತೆ ದಂಪತಿಗಳು ಅನುಚಿತವಾಗಿ ವರ್ತಿಸಿದ ದೂರುಗಳು ಇತ್ತು. ಈ ಬಗ್ಗೆ ಉಡುಪಿ ಟೈಮ್ಸ್ ಜೊತೆ ಮಾತನಾಡಿದ ಆಶಾ ಕಾರ್ಯಕರ್ತೆ ಸರೋಜಾ ರವರು ಬಿಸಿಲು ಬೇಗೆ ಎನ್ನೆದೆ ಜನರ ಆರೋಗ್ಯ ವಿಚಾರಿಸಲು ಹೋದರೆ ನಮ್ಮ ಮೇಲೆ ನಡೆಯುವ ದೌಜನ್ಯ ಬೇಸರ ತಂದಿದೆ. ಈ ಹಿಂದೆ ಇದೇ ಮನೆಯವರು ನನಗೆ ನಿಂದಿಸಿದ್ದಾರೆ, ಇಂದೂ ಕೂಡ ಇದೇ ರೀತಿ ವರ್ತಿಸಿದ್ದು, ನಮಗೆ ಕರ್ತವ್ಯ ನಿರ್ವಹಿಸಲು ಭಯ ಹುಟ್ಟಿಸಿದೆ, ಪೊಲೀಸರು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!