ಕೋಟ: ಯಕ್ಷಗಾನ ಕಲಾವಿದ ಉದಯ ಕಡಬಾಳ ಬೆಂಗಳೂರಿನಲ್ಲಿ ಪತ್ತೆ?

ಕೋಟ: (ಉಡುಪಿ ಟೈಮ್ಸ್ ವರದಿ) ಯಕ್ಷಗಾನ ಕಲಾವಿದ ಉದಯ ಕಡಬಾಳ ಅವರು ಎ.21ರಂದು ಮನೆಯಿಂದ ಹೊರಟವರು ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಅಶ್ವಿನಿ ಕೊಂಡದಕುಳಿ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಕೋಟ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಮಾಡಿರುವ ಸುದ್ದಿ ಬಂದಿದ್ದು ಕಲಾವಿದೆ ಅಶ್ವಿನಿ ಕೊಂಡದಕುಳಿ ದೃಡೀಕರಿಸಿದ್ದಾರೆ.

ಎ.21 ರಂದು ಶಿರಸಿಗೆ ಹೋಗುತ್ತೇನೆ ಎಂದು ತನ್ನ ಕಾರಿನಲ್ಲಿ ಅವರು ಮನೆಯಿಂದ ಹೊರಟಿದ್ದರು. ಹಾಗೆ ಹೋದವರು ಮತ್ತೆ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಶಿರಸಿ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಹೆದರಿ ಕೋಟ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದೆ.

ಇದೀಗ ಉದಯ ಬೆಂಗಳೂರಿನಲ್ಲಿ ಪತ್ತೆ ಪೊಲೀಸ್ ಮೂಲಗಳು ಕೂಡ ದೃಢ ಪಡಿಸಿದೆ. ವಾರಗಳ ಕಾಲ ಸಂಪರ್ಕಕ್ಕೆ ಸಿಗದೇ ಉಳಿಯಲು ಕಾರಣ ಏನೆಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!