ಮೂಗಿಗೆ ಲಿಂಬೆ ರಸ ಹಾಕಿಸಿಕೊಂಡ ಶಿಕ್ಷಕ ಮೃತ್ಯು!
ರಾಯಚೂರು: ಮೂಗಿಗೆ ನಾಲ್ಕು ಹನಿ ಲಿಂಬೆ ರಸ ಹಾಕಿದರೆ ಆಕ್ಸಿಜನ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂಬುದನ್ನು ನಂಬಿ ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡ ಶಿಕ್ಷಕರೊಬ್ಬರು ಒದ್ದಾಡಿ ಮೃತಪಟ್ಟ ಘಟನೆ ಇಂದು ನಗರದಲ್ಲಿ ನಡೆದಿದೆ.
ಇಲ್ಲಿನ ಶರಣಬಸವೇಶ್ವರ ಕಾಲೊನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ್ (43) ಮೃತ ಪಟ್ಟವರು.ಇವರು ನಿಂಬೆ ಹಣ್ಣಿನ ರಸ ಮೂಗಿಗೆ ಹಾಕಿಕೊಳ್ಳುತ್ತಿದ್ದಂತೆ ತೀವ್ರ ಒದ್ದಾಟದಿಂದ ಮೃತಪಟ್ಟರೆಂದು ಕುಟುಂಬದ ಮೂಲಗಳು ತಿಳಿಸಿವೆ. ಆದರೆ ಸಾವಿಗೆ ನಿಖರ ಕಾರಣ ಏನೆಂಬುದನ್ನು ವೈದ್ಯರು ಇನ್ನಷ್ಟೇ ಖಚಿತಪಡಿಸಬೇಕಿದೆ.
ಮೂಗಿಗೆ ನಾಲ್ಕು ಹನಿ ಲಿಂಬೆ ರಸ ಹಾಕಿದರೆ ಆಕ್ಸಿಜನ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ಇತ್ತೀಚೆಗೆ ವಿಜಯ್ ಸಂಕೇಶ್ವರ್ ಹೇಳಿದ್ದರು. ಈ ಹೇಳಿಕೆಯ ಬಳಿಕ ಹಲವರು ಲಿಂಬೆ ರಸದ ಪ್ರಯೋಗವನ್ನ ಮಾಡಿದ್ದರು