ಕೋಟ: ಪೆರ್ಡೂರು ಮೇಳದ ಯಕ್ಷಗಾನ ಕಲಾವಿದ ನಾಪತ್ತೆ
ಕೋಟ: (ಉಡುಪಿ ಟೈಮ್ಸ್ ವರದಿ) ಮನೆಯಿಂದ ಹೋಗಿದ್ದ ಪೆರ್ಡೂರು ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿರುವ, ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ ನಿವಾಸಿಯಾಗಿರುವ ಪತಿ, ಉದಯ ಹೆಗಡೆ (37) ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಅಶ್ವಿನಿ ಹೆಗಡೆ ದೂರು ದಾಖಲಿಸಿದ್ದಾರೆ.
ಯಕ್ಷಗಾನ ಕಲಾವಿದೆ ಹಾಗೂ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಶ್ವಿನಿ ಅವರು ನಾಲ್ಕು ವರ್ಷದ ಹಿಂದೆ ಯಕ್ಷಗಾನ ಕಲಾವಿದರಾದ ಉದಯ ಹೆಗಡೆ ಅವರನ್ನು ವಿವಾಹವಾಗಿದ್ದು, ಏ.21ರಂದು ಸಂಜೆ 6 ಗಂಟೆಗೆ ಉದಯ ಹೆಗಡೆ ತಮ್ಮ ಕಾರಿನಲ್ಲಿ ಮನೆಯಿಂದ ಹೋದವರು ಮತ್ತೆ ಹಿಂತಿರುಗಿಲ್ಲ. ಮೊಬೈಲ್ ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಸಂಬಂಧಿಕರು ಹಾಗೂ ಪತಿಯ ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ಕೋಟ ಪೊಲೀಸ್ ಠಾಣಾ ದೂರು ಪತ್ನಿ ಅಶ್ವಿನಿ ನೀಡಿದ್ದಾರೆ