ಬ್ರಹ್ಮಾವರ: ಸಮಾಜ ಸೇವಕ ಟಿಎಸ್ ಇಕ್ವಾಲ್ ಸಾಹೇಬ್ ಇನ್ನಿಲ್ಲ
ಉಡುಪಿ, ಎ.27: ಬ್ರಹ್ಮಾವರದ ಟಿ.ಎಸ್.ಇಕ್ವಾಲ್ ಸಾಹೇಬ್(80) ಅಲ್ಪ ಕಾಲದ ಅಸೌಖ್ಯದಿಂದ ಎ.27ರಂದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೋಡಿಬೆಂಗ್ರೆಯ ಟಿ.ಎಸ್.ಅಬ್ದುಲ್ಲಾ ಸಾಹೇಬರ ಮಗನಾಗಿರುವ ಇವರು 30ವರ್ಷಗಳ ಕಾಲ ದುಬೈಯ ಶ್ಲೋಸಮ್ ಟ್ರೇಡಿಂಗ್ ಎಸ್ಟಬ್ಲಿಸ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದರು.
ಇವರು ಹಲವು ಜನಪರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು ಜನಾನುರಾಗಿದ್ದರು.ಇವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಇಂದು ಅಸರ್ ನಮಾಝ್ನ ಬಳಿಕ ಉಪ್ಪಿನಕೋಟೆ ಜುಮಾ ಮಸೀದಿಯಲ್ಲಿ ನೆರವೇರಿಸಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.