ಆತ್ರಾಡಿ – ಮದಗ ರಸ್ತೆಯಲ್ಲಿ ನಡೆದ ಸರಣಿ ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಹಿರಿಯಡಕ: ಆತ್ರಾಡಿ – ಮದಗ ರಸ್ತೆಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಕಾರು ಚಾಲಕ ಹಿಡನ್ ವುಡ್ ರೆಸ್ಟೋರೆಂಟ್ ರಸ್ತೆಯಿಂದ ಏಕಾಏಕಿ ಕಾರನ್ನು ಆತ್ರಾಡಿ-ಮದಗ ಹೆದ್ದಾರಿ ರಸ್ತೆಗೆ ಇಳಿಸಿದ ಪರಿಣಾಮ ಹಿರಿಯಡ್ಕ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಸವಾರೆ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ.

ಪರಿಣಾಮ,  ಸ್ಕೂಟರ್ ಸವಾರೆ ಹಾಗೂ ಬೈಕ್ ಸವಾರ  ರಸ್ತೆಗೆ ಉರುಳಿದ್ದಾರೆ. ಘಟನೆಯಿಂದ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರರಿಬ್ಬರು ಕುಂದಾಪುರದವರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!