ಸರಕಾರದ ಬೇಜವಾಬ್ದಾರಿತನ ಸಾವು ನೋವಿಗೆ ಕಾರಣ- ಬಿಪಿನ್‌ಚಂದ್ರ ಪಾಲ್ ನಕ್ರೆ

ದೇಶದಲ್ಲಿ ಕೊರೋನಾ ಮಹಾಮಾರಿಯ ಸಾಂಕ್ರಾಮಿಕತೆಯ ಆರ್ಭಟ ಮತ್ತು ಜನರ ಸಾವು ನೋವಿಗೆ ಆಡಳಿತಾರೂಢ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅವೈಜ್ಞಾನಿಕ ಕಾರ್ಯವೈಖರಿಯ ಬೇಜವಾಬ್ಧಾರಿ ನಿಲುವುಗಳೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಕೋವಿಡ್-19 ಎರಡನೇ ಅಲೆಯ ಭೀಕರತೆಯ ಬಗ್ಗೆ ತಜ್ಞರ ವರದಿಯ ಮುನ್ನೆಚ್ಚರಿಕೆಯ ಹೊರತಾಗಿಯೂ ಇದನ್ನು ಎದುರಿಸಲು ಸಮರ್ಪಕ ಪೂರ್ವತಯಾರಿಯನ್ನು ಮಾಡದೇ ಇದ್ದದ್ದು, ಪರಿಣಾಮವಾಗಿ ಆಸ್ಪತ್ರೆ, ವೆಂಟಿಲೇಟರ್, ಓಕ್ಸಿಜನ್, ಪೂರಕ ಔ?ಧಗಳ ಕೊರತೆ, ಕಳೆದ ಡಿಸೆಂಬರ್ ತಿಂಗಳಲ್ಲಿಯೇ ದೇಶದಲ್ಲಿ ಕೋವಿಡ್ ಲಸಿಕೆಗಳು ಲಭ್ಯವಿದ್ದರೂ ಅದನ್ನು ಸಕಾಲದಲ್ಲಿ ಜನರಿಗೆ ಕೊಡದೆ ಸೌಹಾರ್ಧತೆಯ ಹೆಸರಲ್ಲಿ ಬೇರೆ ದೇಶಗಳಿಗೆ ಕೊಟ್ಟು ಇಂದು ಈ ಲಸಿಕೆಗಳ ಕೊರತೆಗೆ ಕಾರಣವಾಗಿರುವುದು, ಮತ್ತೊಂದೆಡೆ ಚುನಾವಣಾ ಆಯೋಗ ಹೊರಡಿಸಿದ್ದ ಪಂಚ ರಾಜ್ಯ ಹಾಗೂ ರಾಜ್ಯ ಉಪಚುನಾವಣೆಯ ಆದೇಶವನ್ನ, ಕೋವಿಡ್-19ರ ಸಾಂಕ್ರಾಮಿಕತೆಯ ತುರ್ತು ಸ್ಥಿತಿಯನ್ನು ಮುಂದಿಟ್ಟು ಮುಂದೂಡಬಹುದಾದ ಎಲ್ಲಾ ಅವಕಾಶವಿದ್ದರೂ ಸರಕಾರ ಚುನಾವಣೆಗಳನ್ನು ನಡೆಸಿದ್ದು ಇಂದಿನ ಈ ದುಸ್ಥಿತಿಗೆ ಕಾರಣವಾಗಿದೆ ಎಂದಿರುವ ಅವರು ಜನರ ಜೀವ ಉಳಿಸಲಿಕ್ಕಾಗಿ ತುರ್ತು ಆಸ್ಪತ್ರೆಗಳನ್ನು ನಿರ್ಮಿಸ ಬೇಕಾಗಿದ್ದ ಸರಕಾರವೊಂದಕ್ಕೆ ಜೀವ ತೊರೆದ ಶವಗಳ ಸಂಸ್ಕಾರಕ್ಕಾಗಿ ತುರ್ತು ಸ್ಮಶಾನಗಳನ್ನು ನಿರ್ಮಿಸ ಬೇಕಾದ ಅನಿವಾರ್ಯತೆ ಬಂದದ್ದು ಆಡಳಿತಾರೂಡರ ಆಡಳಿತ ವೈಪಲ್ಯಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಪಿಎಂ ಕೇರ್ಸ್ ಫಂಡ್ ದೇಣಿಗೆ ಹಾಗೂ ಜಿಎಸ್ಟಿ ತೆರಿಗೆ ವಸೂಲಾತಿ ಹೆಸರಲ್ಲಿ ಮಾಹಿತಿ ಹಕ್ಕಿಗೂ ನಿಲುಕದ ರೀತಿಯಲ್ಲಿ ಸಹಸ್ರ ಸಹಸ್ರ ಕೋಟಿ ಹಣ ಸಂಗ್ರಹಣೆಯ ಹೊರತಾಗಿಯೂ, ದೇಶದ 136 ಕೋಟಿ ಜನರಿಗೆ ತಲಾ 300 ರೂಪಾಯಿಯಂತೆ 40,800 ಕೋಟಿ ರೂ. ಖರ್ಚ ಮಾಡಿ ಉಚಿತ ಲಸಿಕೆ ನೀಡಲು ನಿರಾಕರಿಸಿ ಅದನ್ನು ರಾಜ್ಯ ಸರಕಾರದ ತಲೆಗೆ ಹೊರಿಸಿರುವ ಕೇಂದ್ರ ಸರಕಾರದ ಬೇಜವಾಬ್ದಾರಿತನ ಖಂಡನಿಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!