ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಇಬ್ಬರಿಗೆ ಗಾಯ

ಮಂಗಳೂರು: ಮಂಗಳೂರು ಜಿಲ್ಲಾ ಉಪ ಕಾರಾಗೃಹದಲ್ಲಿ ಕೈದಿಗಳ  ನಡುವೆ ಮಾರಾಮಾರಿ ನಡೆದಿದ್ದು ಕನಿಷ್ಠ ಇಬ್ಬರಿಗೆ ಗಾಯಗಳಾಗಿದೆ. ಭಾನುವಾರ ಬೆಳಗಿನ ಉಪಹಾರದ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸಮೀರ್ ಎಂದು ಗುರುತಿಸಲ್ಪಟ್ಟ ದರೋಡೆ-ಆರೋಪಿ ಸಹ ಕೈದಿಯಾಗಿದ್ದ ಅನ್ಸರ್ ಗೆ ಚಮಚ ಮತ್ತು ಇತರ ಅಡುಗೆ ಪಾತ್ರೆಗಳನ್ನು ಬಳಸಿ ಹಲ್ಲೆ ಮಾಡಿದ್ದ. ಆ ಜತೆಗೆ ಜೈನುದ್ದೀನ್ ಎಂದು ಗುರುತಿಸಲ್ಪಟ್ಟ ಕೈದಿಯನ್ನೂ ಗಾಯಗೊಳಿಸಿದ್ದಾನೆ.

ಅನ್ಸರ್ ಕೈ ಮತ್ತು ಕಾಲಿಗೆ ಗಾಯವಾಗಿದ್ದರೆ, ಜೈನುದ್ದೀನ್ ಭುಜ ಮತ್ತು ಬೆನ್ನಿಗೆ ಗಾಯಗಳಾಗಿದೆ. ಕಳೆದ ಜುಲೈನಲ್ಲಿ ಪಣಂಬೂರಿನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್‌ನನ್ನು ಬಂಧಿಸಲಾಗಿದ್ದರೆ, ಕಳೆದ ತಿಂಗಳು  ಮೂಡಬಿದಿರೆಯ ಮಿತಿಯಲ್ಲಿ ನಡೆದ ಡಕಾಯಿತಿ  ಪ್ರಕರಣದಲ್ಲಿ ಜೈನುದ್ದೀನ್ ಮತ್ತು ಅನ್ವರ್ ಬಂಧನವಾಗಿತ್ತು.

ಗಾಯಾಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್ ಜೈಲಿಗೆ ಭೇಟಿ ನೀಡಿ ಮಾರಾಮಾರಿಯಲ್ಲಿ ಭಾಗವಹಿಸಿದ್ದವರನ್ನು ಕರೆದಿಯ್ದಿದ್ದಾರೆ, ಮಾಧ್ಯಮದ ಜತೆ  ಮಾತನಾಡಿದ ಪೊಲೀಸ್ ಆಯುಕ್ತ ಶಶಿ ಕುಮಾರ್, “ಕೊಲೆ ಯತ್ನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಮೀರ್ ಬೆಳಿಗ್ಗೆ ಅನ್ಸಾರ್ ಮತ್ತು ಜೈನುದ್ದೀನ್ ಮೇಲೆ ಹಲ್ಲೆ ನಡೆಸಿದ್ದಾನೆ. ಜೈಲು ಸಿಬ್ಬಂದಿ ದಾಳಿಯನ್ನು ತಡೆಯಲು ಪ್ರಯತ್ನಿಸಿದಾಗ, ಅವರ ಮೇಲೂ ಹಲ್ಲೆ ನಡೆಸಿದರು, ಇದೀಗ ಅವರುಗಳನ್ನುಪ್ರತ್ಯೇಕ ಬ್ಯಾರಕ್‌ಗೆ ವರ್ಗಾಯಿಸಲಾಗಿದೆ.

“ಘಟನೆಯ ನಂತರ, ನಾನು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದೆ. ಅವರನ್ನು ವಿಚಾರಣೆ ನಡೆಸಿದಾಗ ಅವರು ಪೊಲೀಸ್ ಅಧಿಕಾರಿಗಳ ಮೇಲೆ ವಸ್ತುಗಳನ್ನು ಎಸೆಯುವ ಮೂಲಕ ಗಲಾಟೆ ನಡೆಸಿದ್ದಾಗಿ. ಜೈಲು ಅಧಿಕಾರಿಗಳು ನೀಡಿದ ಮಾಹಿತಿಯಂತೆ ನಾವು ಪ್ರಕರಣವನ್ನು ದಾಖಲಿಸಿದ್ದೇವೆ,  ಜೈಲು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಮೀರ್ ಪೊಲೀಸರ ಮೇಲೆ ಹಲ್ಲೆ ಮಾಡುವ ಚಾಳಿ ಹೊಂದಿದ್ದಾನೆ. ಇಂತಹಾ ಘಟನೆ ನಡೆಸಲು ಆತ ಇತರ ಕೈದಿಗಳನ್ನು ಪ್ರೇರೇಪಿಸುತ್ತಿದ್ದನು “ಎಂದು ಆಯುಕ್ತರು ಹೇಳಿದರು.

Leave a Reply

Your email address will not be published. Required fields are marked *

error: Content is protected !!