ಉಡುಪಿ ವೀಕೆಂಡ್ ಕರ್ಫ್ಯೂ- ಇಂದು ಮತ್ತು ನಾಳೆ ಒಟ್ಟು 644 ಮದುವೆಗೆ ಅನುಮತಿ
ಉಡುಪಿ ಎ.25(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ವಾರಾಂತ್ಯ ಲಾಕ್ ಡೌನ್ ವಿಧಿಸಲಾಗಿದೆ. ಇದರಿಂದ ವಾರಾಂತ್ಯ ದಲ್ಲಿ ನಡೆಯುವ ಮದುವೆ ಕಾರ್ಯಕ್ರಮಗಳಿಗೆ ತೊಂದರೆಯಾಗಿತ್ತು. ಇದಕ್ಕಾಗಿ ವಾರಾಂತ್ಯದಲ್ಲಿ ನಡೆಯುವ ಮದುವೆಗೆ ಕೆಲವು ನಿಯಮಗಳಿಗೆ ಒಳಪಟ್ಟು ಜಿಲ್ಲಾಡಳಿತದ ಅನುಮತಿ ಪಡೆದು ನಡೆಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ ಅನೇಕ ಮದುವೆ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ ಅಸ್ತು ಎಂದಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಒಟ್ಟು 644 ಮದುವೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ ಇಂದು 354 ಹಾಗೂ ನಾಳೆ 290 ಮದುವೆ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಿದೆ. ಇಂದು ಜಿಲ್ಲಾಡಳಿತ ಅನುಮತಿ ನೀಡಿರುವ 354 ಮದುವೆಗಳ ಪೈಕಿ ಉಡುಪಿಯಲ್ಲಿ 71, ಕಾರ್ಕಳ 14, ಕುಂದಾಪುರ 91, ಬ್ರಹ್ಮಾವರ 55, ಕಾಪು 30, ಬೈಂದೂರು 54, ಹೆಬ್ರಿ 12 ಮದುವೆ ಕಾರ್ಯಕ್ರಮ ನಡೆಸಲು ಅನುಮತಿಸಲಾಗಿದೆ.
ಇನ್ನು ನಾಳೆ ಅನುಮತಿ ನೀಡಿರುವ 290 ಮದುವೆ ಕಾರ್ಯಕ್ರಮಗಳ ಪೈಕಿ ಕಾರ್ಕಳ 17, ಹೆಬ್ರಿ 4, ಕುಂದಾಪುರ 152, ಬೈಂದೂರು 25, ಉಡುಪಿ 51, ಕಾಪು 17,ಬ್ರಹ್ಮಾವರ 24 ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ.
ಸದ್ಯ ಜಿಲ್ಲೆಯಲ್ಲಿ ಅನುಮತಿಸಿರುವ ಒಟ್ಟು ಕಾರ್ಯಕ್ರಮಗಳ ಪೈಕಿ ಕಾರ್ಕಳ 58, ಹೆಬ್ರಿ 16, ಕುಂದಾಪುರ 243, ಬೈಂದೂರು 79 , ಉಡುಪಿ 122, ಕಾಪು 47, ಬ್ರಹ್ಮಾವರ 79 ಒಟ್ಟು ಜಿಲ್ಲೆಯಲ್ಲಿ 644 ಸಮಾರಂಭಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ.