ಮಲ್ಪೆ: ಕೊರೋನಾ ಸೋಂಕು ಹೆಚ್ಚಳಕ್ಕೆ ಆತಂಕ- ಯುವಕ ಆತ್ಮಹತ್ಯೆ
ಮಲ್ಪೆ, ಎ.24: ಕೆಳಾರ್ಕಳ ಬೆಟ್ಟು ಶ್ಯಾಮಿಲಿ ಗ್ಯಾಸ್ ಗೋಡೌನ್ ರಸ್ತೆ ಎಂಬಲ್ಲಿ ಯುವಕನೋರ್ವ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕೆಳಾರ್ಕಳಬೆಟ್ಟುವಿನ ಪ್ರಸನ್ನ ಡಿ ಅಲ್ಮೇಡ(26) ಮೃತ ಯುವಕ. ಈತ ಕಳೆದ ಒಂದು ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ದೆಹಲಿಯಲ್ಲಿ ಉದ್ಯೋಗದಲ್ಲಿರುವ ತನ್ನ ಅಣ್ಣ ಹಾಗೂ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದ ಮಾನಸಿಕವಾಗಿ ನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ