ಮೃತ ವ್ಯಕ್ತಿಗಳ ಹೆಸರನ್ನು ಪಡಿತರ ಚೀಟಿಗಳಿಂದ ತಕ್ಷಣ ತೆಗೆಯಲು ಸೂಚನೆ- ತಪ್ಪಿದಲ್ಲಿ ಕಾನೂನು ಕ್ರಮದ ಎಚ್ಚರಿಕೆ
ಉಡುಪಿ ಎ.24 (ಉಡುಪಿ ಟೈಮ್ಸ್ ವರದಿ): ಮೃತರಾಗಿರುವ ಹೆಸರನ್ನು ಪಡಿತರ ಚೀಟಿಗಳಿಂದ ತಕ್ಷಣ ತೆಗೆದು ಹಾಕುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಪಡಿತರ ಚೀಟಿಗಳಲ್ಲಿ ಸೇರ್ಪಡೆಯಾಗಿರುವ ಯಾವುದೇ ವ್ಯಕ್ತಿ ಮೃತರಾದರೇ ಅಂಥ ವ್ಯಕ್ತಿಗಳ ಹೆಸರಗಳನ್ನು ಪಡಿತರ ಚೀಟಿಗಳಿಂದ ತೆಗೆಸಬೇಕಾದುದು ಕುಟುಂಬದ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಯಾವುದೇ ವ್ಯಕ್ತಿ ಮೃತರಾಗಿದ್ದರೆ ಅಂತಹವರ ಹೆಸರಗಳನ್ನು ಪಡಿತರ ಚೀಟಿಗಳಿಂದ ತಕ್ಷಣ ಮರಣ ಪ್ರಮಾಣ ಪತ್ರ ನೀಡಿ ತೆಗೆದುಹಾಕಬೇಕು.
ಮೃತರ ಹೆಸರಗಳನ್ನು ಪಡಿತರ ಚೀಟಿಗಳಿಂದ ತಕ್ಷಣ ತೆಗೆಸಿ ಹಾಕದಿದ್ದಲ್ಲಿ ಅವರ ಹೆಸರಿನಲ್ಲಿ ಪಡೆಯುವ ಪಡಿತರ ವಸ್ತುಗಳ ಮೌಲ್ಯ ವಸೂಲಿ ಮಾಡುವುದರ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದ್ದಾರೆ.