ಕೋವಿಡ್ ಉಲ್ಬಣ: ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ ಕುವೈತ್

ನವದೆಹಲಿ: ದೇಶದಲ್ಲಿ ಭಾರೀ ಏರಿಕೆ ಕಾಣುತ್ತಿರುವ ಕೋವಿಡ್-19 ಪರಿಸ್ಥಿತಿಯಿಂದಾಗಿ ಮುಂದಿನ ಆದೇಶದವರೆಗೂ ಭಾರತದಿಂದ ಬರುವ ಎಲ್ಲಾ ವಾಣಿಜ್ಯ ವಿಮಾನಗಳನ್ನು ಕುವೈತ್ ಸ್ಥಗಿತಗೊಳಿಸಿದೆ. ಆರೋಗ್ಯ ಅಧಿಕಾರಿಗಳ ಸೂಚನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ

ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಭಾರತದಿಂದ ಬರುವ ಎಲ್ಲಾವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಿದೆ ಎಂದು ಕುವೈತ್ ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ಭಾರತದಿಂದ ನೇರವಾಗಿ ಅಥವಾ ಬೇರೆ ದೇಶದ ಮೂಲಕ ಬರುವ ಎಲ್ಲಾ ಪ್ರಯಾಣಿಕರನ್ನು ಅವರು ಭಾರತದ ಹೊರಗೆ ಕನಿಷ್ಟ 14 ದಿನಗಳನ್ನು ಕಳೆಯದ ಹೊರತು ದೇಶ ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಎಂದು  ಟ್ವಿಟರ್‌ನಲ್ಲಿ ಪ್ರಕಟಣೆ ನೀಡಿದೆ.

ಕುವೈತ್ ನಾಗರಿಕರು, ಅವರ ಪ್ರಾಥಮಿಕ ಸಂಬಂಧಿಗಳುಮತ್ತು ಅವರ ಮನೆಯ ಕೆಲಸಗಾರರಿಗೆ ದೇಶ ಪ್ರವೇಶಿಸಲು ಅವಕಾಶ ನೀಡಲಾಗುವುದು. ಅಲ್ಲದೆ ಸರಕು ಹಾರಾಟದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪ್ರಕಟಣೆ ಹೇಳಿದೆ.

ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ದೇಶದ ಅತಿದೊಡ್ಡ ವಲಸಿಗ ಸಮುದಾಯವಾಗಿರುವ ಭಾರತೀಯ ಜನರು ಒಂದು ದಶಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಾಸವಿದ್ದಾರೆ.

ಈ ಹಿಂದೆ, ಯುಕೆ, ಯುಎಇ ಮತ್ತು ಕೆನಡಾ ರಾಷ್ಟ್ರಗಳು ಭಾರತದಿಂದ ಬರುವ ವಿಮಾನಯಾನವನ್ನು ನಿಷೇಧಿಸಿದ್ದವು.

ಏತನ್ಮಧ್ಯೆ, ಯುಎಇ ಶುಕ್ರವಾರ ಭಾರತಕ್ಕೆ ತನ್ನ ಪ್ರಯಾಣ ನಿಷೇಧವನ್ನು ನವೀಕರಿಸಿದೆ, ಯುಎಇ ಗುರುವಾರ  10 ದಿನಗಳವರೆಗೆ ಭಾರತದ ಪ್ರಯಾಣಿಕರನ್ನು ನಿರ್ಬಂಧಿಸಿದೆ.

Leave a Reply

Your email address will not be published. Required fields are marked *

error: Content is protected !!