ಉಡುಪಿ: ಪೌರ ಕಾರ್ಮಿಕರಿಗೆ ಹಲ್ಲೆ ಪ್ರಕರಣ-ಪ್ರತಿದೂರು ದಾಖಲು

ಉಡುಪಿ, ಎ.24 (ಉಡುಪಿ ಟೈಮ್ಸ್ ವರದಿ) : ಪೌರ ಕಾರ್ಮಿಕರೊಬ್ಬರಿಗೆ ಮೂವರು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

ಈ ಬಗ್ಗೆ ಸಿಂಧು ಎಂಬುವವರು ದೂರು ನೀಡಿದ್ದು, ಅವರು ನೀಡಿರುವ ದೂರಿನ ಪ್ರಕಾರ  ಎ.22 ರಂದು‌ ಸಿಂಧು ಅವರು ಅವರ  ಸಹೋದರ ದೇವಿಪ್ರಸಾದ್ ರೊಂದಿಗೆ ಉದ್ಯಾವರದ ಪಂಜುರ್ಲಿ ದೇವಸ್ಥಾನಕ್ಕೆ ಹೋದವರು ವಾಪಾಸ್ಸು ಬೈಕಿನಲ್ಲಿ ಬರುತ್ತಿರುವಾಗ ಸಂಜೆ ವೇಳೆ ಅಂಬಲಪಾಡಿಯ ಬಳಿ ನಗರ ಸಭೆಯ ವಾಹನವೊಂದು ಬರುತ್ತಿದ್ದು ವಾಹನದ ಡ್ರೈವರ್ ವಾಹನವನ್ನು ಇವರ ಬೈಕಿಗೆ ಅಡ್ಡ ತಂದು ನಿಲ್ಲಿಸಿದ್ದಾನೆ. ಈ ವೇಳೆ  ಸಿಂಧು ಅವರ ಸಹೋದರ ಡ್ರೈವರನ್ನುಉದ್ದೇಶಿಸಿ ನಿನಗೆ ಕಣ್ಣು ಕಾಣುದಿಲ್ಲವಾ ಗಾಡಿಯನ್ನು ಯಾಕೆ ಅಡ್ಡ ತಂದೆ ಎಂದು ಕೇಳಿದಕ್ಕೆ ಡ್ರೈವರ್ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೆನ್ನೆಗೆ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಲ್ಲದೇ ಅಲ್ಲೇ ಇದ್ದ ಅಕ್ಕನ ಮಗಳಿಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ  ಎಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!