ವೀಕೆಂಡ್ ಕರ್ಫ್ಯೂ- ಸ್ತಬ್ದವಾದ ಉಡುಪಿ

ಉಡುಪಿ ಎ.24(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಅದರಂತೆ ನೈಟ್ ಕರ್ಫ್ಯೂ, ವಾರಂತ್ಯ ಲಾಕ್ ಡೌನ್ ಹಾಗೂ ಇವುಗಳ ಅವಧಿಯನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ಜಿಲ್ಲೆಯಲ್ಲಿ ಸೆಕ್ಷನ್ 144ನ ಅನ್ವಯ ನಿಷೇಧಾಜ್ಞೆಯನ್ನು  ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.  ಈ ನಿಯಮ ಅನುಸಾರ ಇಂದು ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಪಡಿಸಲಾಗಿದ್ದು, ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ.

ಆದ್ದರಿಂದ ಉಡುಪಿ, ಮಣಿಪಾಲ, ಹೆಬ್ರಿ, ಕಾಪು, ಕುಂದಾಪುರ ಹೀಗೆ ಜಿಲ್ಲೆಯಾದ್ಯಂತ ಇಂದು ಬೆಳಗ್ಗೆ ನಿತ್ಯ ಬಳಕೆಯ ವಸ್ತುಗಳ ಅಂಗಡಿಗಳು, ಹೊಟೇಲ್ ಗಳು 10 ಗಂಟೆ ವರೆಗೆ ತೆರೆದುಕೊಂಡಿದ್ದವು. ಜಿಲ್ಲೆಯಾದ್ಯಂತ ಹಲವೆಡೆ ಅಂಗಡಿ ಮುಂಗಟ್ಟುಗಳಲ್ಲಿ ದಿನ ನಿತ್ಯದ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತ್ತು. ಬೆಳಗ್ಗಿನಿಂದ ನಿತ್ಯ ಬಳಕೆ ಯ ವಸ್ತುಗಳ ಅಂಗಡಿಗನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. 10 ಗಂಟೆ ಬಳಿಕ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.  ಆರಂಭದಲ್ಲಿ ಹೊಟೇಲ್ ಗಳನ್ನು ತೆರೆಯಲು ಇಂದು ಮಧ್ಯಾಹ್ನ ದ ವರೆಗೆ ಮಾತ್ರ ಅವಕಾಶ ನೀಡಲಾಗಿತ್ತು.  

ಆದರೆ ನಿನ್ನೆ ಸಂಜೆ ಜಿಲ್ಲಾಧಿಕಾರಿ ಗಳು ಸುದ್ದಿಗೋಷ್ಠಿ ನಡೆಸಿ ರಾತ್ರಿ 9 ಗಂಟೆ ವರೆಗೆ ಹೊಟೇಲ್ ಗಳಿಗೆ ಕಾರ್ಯಚರಿಸಬಹುದು ಎಂದು ತಿಳಿಸಿದ್ದರು ಇದರಿಂದ ಹೊಟೇಲ್ ಮಾಲಿಕರು ಗೊಂದಲಕ್ಕೀಡಾಗಿದ್ದು, ಹಲವೆಡೆ ಇಂದು ಬೆಳಿಗ್ಗೆ ಹೊಟೇಲ್ ಗಳು ತೆರೆದುಕೊಂಡಿದ್ದರೆ ಇನ್ನು ಕೆಲವೆಡೆ ಮು ಚ್ಚಿರುವುದು ಕಂಡು ಬಂದಿದೆ.

ಇನ್ನು ಜಿಲ್ಲೆಯಾದ್ಯಂತ ಯಾವುದೇ ಬಸ್‍ಗಳ ಸಂಚಾರ ಕಂಡು ಬಂದಿಲ್ಲ. ನಿತ್ಯ ಜನ ಸಂಚಾರದಿಂದ ತುಂಬಿ ತುಳುಕುತ್ತಿದ್ದ ನಗರ ಪ್ರದೇಶದಲ್ಲಿ ಜನರ ಓಡಾಟವೂ ಇಂದು ವಿರಳವಾಗಿದ್ದವು.ಒಟ್ಟಿನಲ್ಲಿ ನಿಷೇದಾಜ್ಞೆಯ ಪ್ರಭಾವ ಜಿಲ್ಲೆಯಲ್ಲಿ ಗೋಚರಿಸಿದ್ದು ಇಂದು ಬೆಳಗ್ಗೆ 10 ಗಂಟೆ ಬಳಿಕ ಮೆಡಿಕಲ್, ಆಟೋ ರಿಕ್ಷಾ, ಕೆಎಸ್‍ಆರ್‍ಟಿಸಿ ಸೇವೆ ಹೊರತು ಪಡಿಸಿ ಹೊಟೇಲ್, ಬಾರ್ ನಿತ್ಯ ಬಳಕೆಯ ವಸ್ತುಗಳ ಅಂಗಡಿಗಳು ಹಾಗೂ ಇತರ ವಾಣಿಜ್ಯ ವ್ಯವಹಾರಗಳ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಜಿಲ್ಲೆ ಸ್ತಬ್ದವಾಗಿದೆ.

Leave a Reply

Your email address will not be published. Required fields are marked *

error: Content is protected !!