ಕಂಕಣ ಸೂರ್ಯಗ್ರಹಣ ವೀಕ್ಷಣೆಯಿಂದ ಯಾವುದೇ ದೋಷ ಸಂಭವಿಸುವುದಿಲ್ಲ: ವಿಜ್ಞಾನ ಪರಿಷತ್
ಬೆಂಗಳೂರು: ಜೂನ್ 21ರ ಭಾನುವಾರ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣ ವೀಕ್ಷಣೆಯಿಂದ ಯಾವುದೇ ದೋಷ ಅಥವಾ ಅವಘಡ ಸಂಭವಿಸುವುದಿಲ್ಲ ಎಂದು ರಾಜ್ಯ ವಿಜ್ಞಾನ ಪರಿಷತ್ ತಿಳಿಸಿದೆ.
ಈ ವಿದ್ಯಮಾನ ನೋಡುವುದರಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸುವುದಿಲ್ಲ. ಪ್ರಕೃತಿಯ ಮೇಲೆ ಯಾವ ಅಡ್ಡ ಪರಿಣಾಮಗಳೂ ಇದರಿಂದ ಉಂಟಾಗುವುದಿಲ್ಲ. ಯಾವುದೇ ಭಯವಿಲ್ಲದೆ, ಈ ಎಲ್ಲ ಪ್ರಕ್ರಿಯೆ ವೀಕ್ಷಿಸಬಹುದು ಎಂದು ಹೇಳಿದೆ.
ಜಗತ್ತಿನಾದ್ಯಂತ ಎಲ್ಲೆಲ್ಲಿ ಗೋಚರ?
ಕಂಕಣ ಸೂರ್ಯ ಗ್ರಹಣವು ಭಾರತ ಸೇರಿದಂತೆ ಆಸ್ಟ್ರೇಲಿಯಾ, ಪಾಕಿಸ್ತಾನ, ನೇಪಾಳ, ಸೌದಿ ಅರೇಬಿಯಾ, ಯುರೋಪ್ ನ ಕೆಲ ಭಾಗಗಳಲ್ಲಿ ಗ್ರಹಣ ಕಾಣಬಹುದು.