ಪುಲ್ವಾಮ: ಐಇಡಿ ಸ್ಫೋಟಕ ವಸ್ತು ಪತ್ತೆ

ಶ್ರೀನಗರ ಎ.23: ಭಾರೀ ಪ್ರಮಾಣ ಐಇಡಿ ಸ್ಫೋಟಕ ವಸ್ತುಗಳನ್ನು ಭಾರತೀಯ ಸೇನೆ ಪತ್ತೆ ಹಚ್ಚಿರುವ ಘಟನೆ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದಿದೆ. ಪುಲ್ವಾಮ ಜಿಲ್ಲೆಯ ಜನನಿ ಬಿಡ ಪ್ರದೇಶವಾಗಿರುವ ಸರ್ಕಲ್ ರಸ್ತೆಯಲ್ಲಿ ಐಇಡಿ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು, ಐಇಡಿ ಪತ್ತೆಯಾಗುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬಾಂಬ್ ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. 

Leave a Reply

Your email address will not be published. Required fields are marked *

error: Content is protected !!