ಉಡುಪಿ: ಮತ್ತೆ ಪೌರಕಾರ್ಮಿಕರೋರ್ವರಿಗೆ ಮೂವರಿಂದ ಹಲ್ಲೆ
ಉಡುಪಿ ಎ.23(ಉಡುಪಿ ಟೈಮ್ಸ್ ವರದಿ): ನಗರ ಸಭೆಯ ತ್ಯಾಜ್ಯ ವಿಲೇವಾರಿಯ ವಾಹನವನ್ನು ತಡೆದ ಮೂವರು, ಪೌರಕಾರ್ಮಿಕರೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಉಡುಪಿಯ ಅಂಬಲಪಾಡಿಯಲ್ಲಿ ನಡೆದಿದೆ.
ಈ ಬಗ್ಗೆ ಪೌರಕಾರ್ಮಿಕ ಸುರೇಶ್ ಪೊಲೀಸರಿಗೆ ದೂರು ನೀಡಿದ್ದು, ಅವರು ನೀಡಿರುವ ದೂರಿನ ಪ್ರಕಾರ, ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಸುರೇಶ ಅವರು ಉಡುಪಿ ನಗರ ಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು ಎ.22 ರಂದು ಸಂಜೆ ವೇಳೆಗೆ ಸಹಾಯಕ ಮಂಜು ಎಂಬುವವರೊಂದಿಗೆ ಅಂಬಲಪಾಡಿ ಗ್ರಾಮದ ಅಪಾರ್ಟ್ಮೆಂಟ್ ವೊಂದರ ಬಳಿ ಕಸ ವಿಲೇವಾರಿ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬೈಕ್ನಲ್ಲಿ ಬಂದ ಒಬ್ಬ
ಯುವಕ ಹಾಗೂ ಇಬ್ಬರು ಯುವತಿಯರು ಸುರೇಶ್ ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಲ್ಲದೆ ಕೈಯಿಂದ ಹಲ್ಲೆ ಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.