ಧಿಢೀರ್ ಕಾರ್ಯಾಚರಣೆ- ಉಡುಪಿ ನಗರ ಸಭೆಯ ಅಧಿಕಾರಿಗಳಿಂದ ಅಂಗಡಿ ಮುಂಗಟ್ಟು ಬಂದ್

ಉಡುಪಿ,ಏ.22(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೋವಿಡ್‍ನ್ನು ನಿಯಂತ್ರಿಸುವ ಸಲುವಾಗಿ ಪರಿಷ್ಕøತ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿದೆ. ರಾಜ್ಯ ಸರಕಾರ ಹಲವೆಡೆ ಇಂದು ಮಧ್ಯಾಹ್ನದಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗುತ್ತಿದೆ. ಅದರಂತೆ ಇದೀಗ ಉಡುಪಿಯಲ್ಲಿ ಕೂಡಾ ಧಿಢೀರ್ ಕಾರ್ಯಾಚರಣೆ ನಡೆಸಿ ನಗರ ಸಭೆಯ ಅಧಿಕಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ.

ನಗರದ ಅಂಗಡಿಗಳಿಗೆ ತೆರಳಿದ ಅಧಿಕಾರಿಗಳು ಸರ್ಕಾರದ ಪರಿಷ್ಕøತ ಮಾರ್ಗಸೂಚಿ ಬಗ್ಗೆ ಮನವರಿಕೆ ಮಾಡಿ ಅಂಗಡಿ ಮುಚ್ಚಿಸಲು ಸೂಚಿಸಿದರು. ಈ ವೇಳೆ ಮೆಡಿಕಲ್ಸ್, ತರಕಾರಿ ಅಂಗಡಿ ಹಾಗೂ ಅಗತ್ಯ ವಸ್ತುಗಳ ಅಂಗಡಿ ಹೊರತು ಪಡಿಸಿ ಇತರ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದರು.

ಅಧಿಕಾರಿಗಳ ಧಿಢೀರ್ ಕಾರ್ಯಾಚರಣೆಗೆ ಅನೇಕ ಅಂಗಡಿ ವ್ಯಾಪಾರಸ್ತರು ಕಂಗಾಲಾಗಿದ್ದರು. ಯಾವುದೇ ಮಾಹಿತಿ ನೀಡದೇ ಧಢೀರ್ ಆಗಿ ಏಕಾಏಕಿ ಬಂದು ಅಂಗಡಿಗಳನ್ನು ಅಧಿಕಾರಿಗಳು ಬಂದ್ ಮಾಡಿಸುತ್ತಿದ್ದ ಕ್ರಮಕ್ಕೆ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಸರ್ಕಾರ ಮಾ.22 ರಂದು ಹೊರಡಿಸಿದ ಹೊಸ ಮಾರ್ಗಸೂಚಿ ಪ್ರಕಾರ ದಿನಸಿ, ಹಣ್ಣು, ತರಕಾರಿ ಡೈರಿ, ಮುಂತಾದ ಅಗತ್ಯ ಸಾಮಾಗ್ರಿಗಳ ಅಂಗಡಿ ಹೊರತುಪಡಿಸಿ ಮೊಬೈಲ್ ಶಾಪ್, ಟಿವಿ, ಎಲೆಕ್ಟ್ರಾನಿಕ್ ಶೋ ರೂಮ್, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ ಬುಕ್ ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿಗಳು ಇತ್ಯಾದಿ ಬಂದ್ ಮಾಡುವಂತೆ ಸೂಚಿಸಿದೆ.

ಕೊರೊನಾ ಮಾರ್ಗಸೂಚಿಯ ಉಲ್ಲಂಘನೆ ಕಂಡುಬಂದಲ್ಲಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ನಗರಸಭೆ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

1 thought on “ಧಿಢೀರ್ ಕಾರ್ಯಾಚರಣೆ- ಉಡುಪಿ ನಗರ ಸಭೆಯ ಅಧಿಕಾರಿಗಳಿಂದ ಅಂಗಡಿ ಮುಂಗಟ್ಟು ಬಂದ್

  1. Mornig one rule, afternoon another and evening diffrtent. Are we in Tuhlug rule. It is a funidhment for electing this Govt anf deserve this.

Leave a Reply

Your email address will not be published. Required fields are marked *

error: Content is protected !!