ಮಣಿಪಾಲ: ಕೆಎಂಸಿಯಲ್ಲಿ ಶನಿವಾರದ ಹೊರರೋಗಿ ಸೇವೆಗಳು ಮಧ್ಯಾಹ್ನದವರಗೆ ಮಾತ್ರ

ಮಣಿಪಾಲ, .22: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ  “24ನೇ ಏಪ್ರಿಲ್  2021ರಿಂದ ಜಾರಿಗೆ ಬರುವಂತೆ, ಎಲ್ಲಾ ಶನಿವಾರ ಹೊರರೋಗಿ ಸೇವೆಗಳು  ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ರವರೆಗೆ ಅರ್ಧ ದಿನ ಮಾತ್ರ  ಕಾರ್ಯನಿರ್ವಹಿಸಲಿವೆ. ಇದು ಸರ್ಕಾರದ ವಾರಾಂತ್ಯದ ಕರ್ಫ್ಯೂ ಆದೇಶ ಇರುವವರೆಗೆ  ಮುಂದುವರಿಯುತ್ತದೆ.  ” ಎಂದು ತಿಳಿಸಿದ್ದಾರೆ.

ಉಳಿದಂತೆ ಇತರ ಎಲ್ಲಾ ಕೆಲಸದ ದಿನಗಳಲ್ಲಿ, ಹೊರರೋಗಿ ಸೇವೆಗಳು  ಮೊದಲಿನಂತೆ ಬೆಳಿಗ್ಗೆ 8.00 ರಿಂದ ಸಂಜೆ 4.00 ರವರೆಗೆ ಕಾರ್ಯನಿರ್ವಹಿಸಲಿದೆ.  ಆದಾಗ್ಯೂ, ತುರ್ತು ಸೇವೆಗಳು ಎಂದಿನಂತೆ ಎಲ್ಲಾ ದಿನಗಳಲ್ಲಿ 24 X 7 ಲಭ್ಯವಿರುತ್ತದೆಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Leave a Reply

Your email address will not be published. Required fields are marked *

error: Content is protected !!