ಮೀನು ಮಾರಾಟದಲ್ಲಿ ವಿಪರೀತ ನಷ್ಟ- ವಿಷ ಸೇವಿಸಿ ಮಹಿಳೆ ಸಾವು
ಬೈಂದೂರು: ಇಲಿ ಪಾಷಾಣ ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ.
ಶಶಿಕಲಾ (49) ಮೃತಪಟ್ಟವರು.ಇವರು ಮೀನು ಮಾರಾಟ ಮಾಡಿಕೊಂಡಿದ್ದು ಮೀನು ಮಾರಾಟದಲ್ಲಿ ವಿಪರೀತ ನಷ್ಟ ಉಂಟಾಗಿತ್ತು. ಕೆಲವು ಕಡೆ ಕೈ ಸಾಲ ಪಡೆದುಕೊಂಡಿದ್ದು ಸಾಲ ವಾಪಸ್ಸು ನೀಡಲಾಗದೇ ಇದ್ದುದರಿಂದ ಮನನೊಂದಿದ್ದರು.
ಎ.20 ರಂದು ಬೆಳಿಗ್ಗೆ ಅಸ್ವಸ್ಥಗೊಂಡು ಮಲಗಿದಲ್ಲೆ ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅದೇ ದಿನ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ