ಆಟವಾಡುತ್ತಿ ಇಬ್ಬರು ಬಾಲಕರಿಗೆ ಸಿಡಿಲಾಘಾತ – ಓರ್ವ ಬಾಲಕ ಮೃತ್ಯು
ಮೂಲ್ಕಿ ಎ.21(ಉಡುಪಿ ಟೈಮ್ಸ್ ವರದಿ): ಸಿಡಿಲಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಬಾಲಕರ ಪೈಕಿ ಓರ್ವ ಬಾಲಕ ಮೃತಪಟ್ಟಿರುವ ಘಟನೆ ಇಂದು ಮೂಲ್ಕಿಯಲ್ಲಿ ನಡೆದಿದೆ.
ಮನ್ಸೂರ್ ಎಂಬುವರ ಎರಡನೇ ಪುತ್ರ ನಿಹಾನ್ (5) ಮೃತಪಟ್ಟ ಬಾಲಕ. ಘಟನೆಯಲ್ಲಿ ಸಿಡಿಲಿನ ಆಘಾತಕ್ಕೆ ಒಳಗಾದ ಮತ್ತೋರ್ವ ಬಾಲಕ ಗಂಗಾವತಿ ಮೂಲದ ದುರ್ಗಪ್ಪ ಎಂಬುವವರ ಮಗ ಮಾರುತೇಶ್ (6) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾನೆ ಎಂದು ವರದಿಯಾಗಿದೆ.
ಬೊಳ್ಳೂರಿನ ಇಂದಿರಾನಗರದಲ್ಲಿ ಮನೆಯ ಹತ್ತಿರ ನಿನ್ನೆ ಸಂಜೆ ಆಟವಾಡುತ್ತಿದ್ದಾಗ ಇಬ್ಬರು ಬಾಲಕರಿಗೆ ಸಿಡಿಲು ಬಡಿದಿತ್ತು. ಪರಿಣಾಮ ಮಕ್ಕಳು ಸ್ಥಳದಲ್ಲಿಯೇ ಮೂರ್ಚೆ ಹೋಗಿದ್ದರು. ನಂತರ ಸ್ಥಳೀಯರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಬಾಲಕರ ಪೈಕಿ ಇಂದು ಮುಂಜಾನೆ ಚಿಕಿತ್ಸೆಫಲಕಾರಿಯಾಗದೆ ಓರ್ವ ಬಾಲಕ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.