ಅಜೆಕಾರು: ಕೀಟ ನಾಶಕ ಸೇವಿಸಿ ಕೃಷಿಕ ಆತ್ಮಹತ್ಯೆ
ಅಜೆಕಾರು ಎ.21(ಉಡುಪಿ ಟೈಮ್ಸ್ ವರದಿ): ಕೀಟ ನಾಶಕ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅಜೆಕಾರಿನಲ್ಲಿ ನಡೆದಿದೆ. ಉಮೇಶ ಪೂಜಾರಿ (48) ಮೃತಪಟ್ಟವರು.
ಇವರು, ಕಾರ್ಕಳದ ಕೆರ್ವಾಶೆ ಗ್ರಾಮ ಅರ್ಥಬೆಟ್ಟು ಎಂಬಲ್ಲಿ ಕೃಷಿ ಕೆಲಸ ಮಾಡಿಕೊಂಡು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅಲ್ಲದೆ ವಿಪರೀತ ಕುಡಿತದ ಅಭ್ಯಾಸವನ್ನೂ ಹೊಂದಿದ್ದರು. ಇದೇ ಕಾರಣದಿಂದ ಜೀವನದಲ್ಲಿ ಬೇಸರಗೊಂಡು ಕೃಷಿಗೆ ಬಳಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ಈ ವೇಳೆ ಉಮೇಶ ಪೂಜಾರಿ ಅವರ ತಮ್ಮ, ಅಸ್ವಸ್ಥಗೊಂಡಿದ್ದ ಉಮೇಶ್ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಮೇಶ್ ಪೂಜಾರಿ ಅವರು, ಎ.20 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ