ವಿದ್ಯಾರ್ಥಿಗಳು ಹಾಗೂ ಜನರ ಹಿತರಕ್ಷಣೆಗಾಗಿ ನರ್ಮ್ ಬಸ್ ಸೇವೆ ಪುನಾರಂಭಿಸಿ: ರಮೇಶ್ ಕಾಂಚನ್ ಅಗ್ರಹ
ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ನಾಗರಿಕರ ಹಿತರಕ್ಷಣೆಗಾಗಿ ಸರಕಾರಿ ನರ್ಮ್ ಬಸ್ ಸೇವೆ ಪುನಾರಂಭಿಸುವಂತೆ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಆಗ್ರಹ ಮಾಡಿದ್ದಾರೆ. ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರಕಾರದ ಕಟ್ಟು ನಿಟ್ಟಿನ ನಿಯಮಾವಳಿಗಳ ಪ್ರಕಾರ ಪ್ರಯಾಣಿಕರ ಖಾಸಗಿ ಬಸ್ಸುಗಳಲ್ಲಿ ಅಂತರ ಕಾಪಾಡಿಕೊಳ್ಳಲು ಕಷ್ಟ ಸಾಧ್ಯವಾಗಿದೆ.
ನಿನ್ನೆಯಷ್ಟೇ ಜಿಲ್ಲಾಧಿಕಾರಿಗಳು ಅಂತರ ಕಾಪಾಡದೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಕೆಳಗಿಳಿಸಿದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಕಷ್ಟ ಅನಭವಿಸುವಂತಾಗಿದೆ. ದೂರದ ಹಳ್ಳಿ ಪ್ರದೇಶಗಳಿಗೆ ತಾಸಿಗೊಂದರಂತೆ ಬಸ್ಸುಗಳಿದ್ದು, ಪ್ರಯಾಣಿಕರು ತಾಸುಗಟ್ಟಲೆ ಕಾದು ಬಸ್ಸು ಹತ್ತಿ ಹೋಗಬೇಕಾಗಿರುತ್ತದೆ.
ಇದರಿಂದ ಪ್ರಯಾಣಿಕರ ಸಂಖ್ಯೆಯೂ ಜಾಸ್ತಿಯಾಗುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಸಾಧ್ಯವಾಗಿದೆ. ದೂರದ ಹಳ್ಳಿ ಹಾಗೂ ನಗರ ಪ್ರದೇಶದ ಹೆಚ್ಚು ಪ್ರಯಾಣಿಕರು ಓಡಾಡುವ ಭಾಗಕ್ಕೆ ಈಗಾಗಲೇ ಸ್ಥಗಿತ ಗೊಳಿಸಲಾಗಿರುವ ಸರಕಾರಿ ನರ್ಮ್ ಬಸ್ ಗಳನ್ನು ಶೀಘ್ರವೇ ಪುನಾರಂಭಿಸುವಂತೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಅಗಿರುವ ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.