ಅನಗತ್ಯ ಮನೆಯಿಂದ ಹೊರಬರಬೇಡಿ, ದೇಶವನ್ನು ಲಾಕ್‌ಡೌನ್‌ನಿಂದ ಬಚಾವ್‌ ಮಾಡಬೇಕಿದೆ: ಪ್ರಧಾನಿ ಭಾಷಣ

ನವದೆಹಲಿ: ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಇಂದು ರಾತ್ರಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕೋವಿಡ್ ಸೋಂಕು ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ದೇಶದಲ್ಲಿ ಆಮ್ಲಜನಕ ಉತ್ಪಾದನೆಗೆ ಕ್ರಮಕೈಗೊಳ್ಳಲಾಗಿದೆ. ಹಾಗೂ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲಾಗಿದ್ದು ಜನರು ಆತಂಕಪಡುವ ಅಗತ್ಯವಿಲ್ಲ ಎಂದರು. 

ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಜನರು ಧೈರ್ಯ ಕಳೆದುಕೊಳ್ಳಬಾರದು ಎಂದರು. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಇದೇ ವೇಳೆ ಸಾಂತ್ವನ ಹೇಳಿದರು.

ಅನಗತ್ಯವಾಗಿ ಯಾರೂ ಕೂಡ ಮನೆಯಿಂದ ಹೊರಬರಬೇಡಿ, ಮಾಸ್ಕ್‌ ಹಾಕುವುದು ಹಾಗೂ ಅಂತರ ಕಪಾಡಿಕೊಳ್ಳುವುದನ್ನು ಮರೆಯಬೇಡಿ. ನಾವು ದೇಶವನ್ನು ಲಾಕ್‌ಡೌನ್‌ನಿಂದ ಬಚಾವ್‌ ಮಾಡಬೇಕಿದೆ ಎಂದು ಮೋದಿ ಹೇಳಿದರು. ಲಾಕ್‌ಡೌನ್‌ ಮಾಡುವುದು ಬೇಡ ಎಂದು ನಾನು ಎಲ್ಲಾ ರಾಜ್ಯಗಳಲ್ಲಿ ಮನವಿ ಮಾಡುತ್ತೆನೆ. ಲಾಕ್‌ಡೌನ್‌ ಕೊನೆಯ ಅಸ್ತ್ರವಾಗಿರಬೇಕು ಎಂದು ಹೇಳಿದರು.

ಕೊರೊನಾ ವಿರುದ್ಧ ದೇಶ ಇಂದು ಮತ್ತೊಂದು ದೊಡ್ಡ ಹೋರಾಟ ನಡೆಸುತ್ತಿದೆ. ಸುನಾಮಿಯಂತೆ ಎರಡನೇ ಅಲೆ ದೇಶದಲ್ಲಿ ವ್ಯಾಪಿಸಿದೆ. ಕಳೆದ ಕೆಲ ದಿನಗಳಿಂದ ಸೋಂಕಿನಿಂದ ಮೃತರಾದ ಕುಟುಂಬಕ್ಕೆ ಪ್ರಧಾನಿಗಳು ಸಂತಾಪ ಸೂಚಿಸಿದರು. ಇಂದು ಆ ಎಲ್ಲ ಕುಟುಂಬಗಳ ಜೊತೆ ಓರ್ವ ಕುಟುಂಬಸ್ಥನಾಗಿ ಜೊತೆಯಲ್ಲಿದ್ದೇನೆ ಎಂದು ಧೈರ್ಯ ತುಂಬಿದರು.

ಮೊದಲ ಅಲೆಯಲ್ಲಿ ಎಲ್ಲ ಕೊರೊನಾ ವಾರಿಯರ್ ಗಳು ತಮ್ಮ ಜೀವನವನ್ನ ಪಣಕ್ಕಿಟ್ಟು ಸೇವೆ ಸಲ್ಲಿಸಿರೋದನ್ನ ನಾವು ಮರೆತಿಲ್ಲ. ಇಂದು ಮತ್ತೆ ಅದೇ ರೀತಿ ಎಲ್ಲ ವಾರಿಯರ್ ಗಳು ಕುಟುಂಬದಿಂದ ದೂರವಾಗಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಮಾಹಾಮಾರಿ ತಡೆಗಾಗಿ ದೇಶ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಆದ್ರೆ ಈ ಬಾರಿ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದ್ದು, ಸರ್ಕಾರ ಈ ಕುರಿತು ಕೆಲಸ ಮಾಡುತ್ತಿದೆ.

ಅವಶ್ಯಕತೆ ಇರೋರಿಗೆ ಆಕ್ಸಿಜನ್ ಪೂರೈಸುವ ಕೆಲಸವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ದೇಶದಲ್ಲಿ ಔಷಧಿ ಉತ್ಪದನಾ ಹೆಚ್ಚಿಸಲಾಗುತ್ತಿದೆ. ದೇಶದ ಬೃಹತ್ ಔಷದೋತ್ಪನ್ನ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಔಷಧಿಯನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ದೊಡ್ಡ ಕೋವಿಡ್ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುತ್ತಿದೆ. ಆಯಾ ರಾಜ್ಯಗಳು ಅವಶ್ಯಕತೆ ಅನುಗುಣವಾಗಿ ಬೆಡ್ ಗಳಿಗಾಗಿ ಕೋವಿಡ್ ಕೇರ್ ಸೆಂಟರ್ ಗಳನ್ನ ನಿರ್ಮಿಸುತ್ತಿವೆ. ವಿಶ್ವದ ಕಡಿಮೆ ಬೆಲೆಯ ಎರಡು ಔಷಧಿಗಳು ನಮ್ಮ ಬಳಿಯಲ್ಲಿದ್ದು, ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ಮೇ 1ರ ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಸಿಗಲಿದೆ. ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಅಭಿಯಾನ ಕೈಗೊಂಡಿದ್ದೇವೆ ಎಂದ ಅವರು, ಜೀವ ಉಳಿಸೋದು ನಮ್ಮೆಲ್ಲರ ಮೊದಲ ಆದ್ಯತೆ. ಇದರ ಜೊತೆಗೆ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಯೋಚಿಸಬೇಕಿದೆ. ಕಳೆದ ವರ್ಷ ಮತ್ತು ಇಂದಿನ ಸ್ಥಿತಿಗೂ ತುಂಬಾ ವ್ಯತ್ಯಾಸ ಇದೆ. ಕಳೆದ ಬಾರಿ ಯಾವುದೇ ಸೌಲಭ್ಯ, ತರಬೇತಿ ಮತ್ತು ಮಾಹಿತಿ ಇಲ್ಲದಿದ್ದರೂ ಕೊರೊನಾ ವಿರುದ್ಧ ಹೋರಾಡಿದ್ದೇವೆ. ಇಂದು ನಮ್ಮ ಬಳಿ ಪಿಪಿಇ ಕಿಟ್, ಲ್ಯಾಬ್, ವ್ಯಾಕ್ಸಿನ್, ಚಿಕಿತ್ಸೆ ವಿಧಾನ ಎಲ್ಲವೂ ತಿಳಿದಿದೆ. ಹಾಗಾಗಿ ಕೊರೊನಾ ಕಾಲದಲ್ಲಿಯೂ ನಾವು ಇಲ್ಲಿಯವರೆಗೂ ಬಂದಿದ್ದೇವೆ. ಇದಕ್ಕೆಲ್ಲ ನೀವು ಕಾರಣ. ಇಂದು ನಿಮ್ಮೆಲ್ಲರ ಸಹಕಾರದೊಂದಿಗೆ ಕೊರೊನಾ 2ನೇ ಅಲೆಯ ವಿರುದ್ಧ ಗೆಲ್ಲಲ್ಲಿದ್ದೇವೆ.

ಪೋರ್ಚುಗಲ್‌ ಪ್ರವಾಸ ರದ್ದು: ಕೋವಿಡ್-19 ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪೋರ್ಚುಗಲ್‌ ಪ್ರವಾಸ ರದ್ದು ಮಾಡಿದ್ದು, ವರ್ಚುವಲ್ ಮೂಲಕ ಭಾರತ ಮತ್ತು ಐರೋಪ್ಯ ಒಕ್ಕೂಟಗಳ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮೇ 8ರಂದು ನಡೆಯಲಿರುವ ಭಾರತ ಮತ್ತು ಐರೋಪ್ಯ ಒಕ್ಕೂಟಗಳ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಪೋರ್ಚುಗಲ್‌ ಪ್ರವಾಸ ಕೈಗೊಂಡಿದ್ದರು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟ ಮತ್ತು ಪೋರ್ಚುಗೀಸ್ ನಾಯಕತ್ವದೊಂದಿಗೆ ಚರ್ಚಿಸಿ ಮೇ 8 ರಂದು ವರ್ಚುವಲ್ ಮೂಲಕ ಶೃಂಗಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಂಗಳವಾರ ವಿದೇಶಾಂಗ ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!