ಮಂಗಳೂರು: ಮತ್ತೆ ಸಾರ್ವಜನಿಕ ಸ್ಥಳಗಳಲ್ಲಿ ಅವಹೇಳನಕಾರಿ ಗೋಡೆ ಬರಹ!

ಮಂಗಳೂರು, ಎ.20(ಉಡುಪಿ ಟೈಮ್ಸ್ ವರದಿ): ದ.ಕ ಜಿಲ್ಲೆಯಲ್ಲಿ ಮತ್ತೆ ಸಾರ್ವಜನಿಕ ಸ್ಥಳಗಳಲ್ಲಿ ಅವಹೇಳನಕಾರಿ ಗೋಡೆ ಬರಹಗಳ ಹಾವಳಿ ಆರಂಭವಾಗಿದೆ.

ಇದೀಗ ಇಂದು ಬೆಳಿಗ್ಗೆ ಮತ್ತೆ ನಗರದ ಪಂಪ್ ವೆಲ್ ಮೇಲ್ಸೆತುವೆ ಯ ಗೋಡೆಯ ಮೇಲೆ ಅವಹೇಳನಕಾರಿ ಬರಹಗಳು ಕಂಡು ಬಂದಿದ್ದು, ಯಾರೋ ಕಿಡಿಗೇಡಿಗಳು ಫ್ಲೈ ಓವರ್ ಗೋಡೆ ಮೇಲೆ ಅವಹೇಳನಕಾರಿ ಪದ ಹಾಗೂ ಲಾಕ್ ಡೌನ್ ಬೇಕಾಗಿದೆ ಎನ್ನುವ ಬರಹವನ್ನು ಕೆಂಪು ಬಣ್ಣದಲ್ಲಿ ದೊಡ್ಡ ಅಕ್ಷರದಲ್ಲಿ ಬರೆದಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್, ಅವರು, “ಪಂಪವೆಲ್ ಫ್ಲೈ ಓವರ್ ಗೋಡೆ ಮೇಲೆ ಬರಹ ಬರೆದ ಘಟನೆ ಇಲಾಖೆಯ ಗಮನಕ್ಕೆ ಬಂದಿದ್ದು ಈ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!