ಸರ್ವ ಪಕ್ಷ ಸಭೆ- ಲಾಕ್ ಡೌನ್ ಮಾಡುವುದು ಬೇಡವೇ ಬೇಡ ಎಂದ ವಿಪಕ್ಷ ನಾಯಕರು
ಬೆಂಗಳೂರು ಎ.19: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ನ್ನು ನಿಯಂತ್ರಿಸುವ ಕುರಿತು ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಧಾನಸೌಧದಲ್ಲಿ ಸರ್ವ ಪಕ್ಷ ಸಭೆ ನಡೆಸಿದರು. ಸಚಿವರು, ಶಾಸಕರು ಮತ್ತು ಅಧಿಕಾರಗಳ ಜೊತೆ ನಡೆದ ಸಭೆಯಲ್ಲಿ ಲಾಕ್ ಡೌನ್ ಮಾಡುವುದು ಬೇಡವೇ ಬೇಡ ಎಂದು ವಿಪಕ್ಷ ನಾಯಕರು ಆಗ್ರಹಿಸಿದರು.
ಸಭೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕರು ಡೌನ್ ಡೌನ್ ಎಂದು ಕೂಗುತ್ತಾ ಲಾಕ್ ಡೌನ್ ಬೇಡವೇ ಬೇಡ ಅದರ ಬದಲಿಗೆ 144 ಸೆಕ್ಷನ್ ಜಾರಿಗೆ ತನ್ನಿ, ಪೊಲೀಸರಿಗೆ ಅಧಿಕಾರ ಕೊಡಿ ಎಂದು ಆಗ್ರಹಿಸಿದರು. ಇದೇ ವೇಳೆ ಕಾಂಗ್ರೆಸ್ ನಾಯಕ ರಾಮಲಿಂಗ ರೆಡ್ಡಿ ಅವರು, ನೈಟ್ ಕರ್ಫ್ಯೂವಿಗೆ ವಿರೋಧ ವ್ಯಕ್ತಪಡಿಸಿ, ನೈಟ್ ಕರ್ಫ್ಯೂನಿಂದ ಕೊರೋನಾ ಹೋಗಲ್ಲ. ಕೋವಿಡ್ ಹೆಸರಿನಲ್ಲಿ ರಾಜಕೀಯ ಮಾಡುವುದು ಬೇಡ. ಕಳೆದ ಬಾರಿ ಫುಡ್ ಕಿಟ್ ಕೊಟ್ಟಾಗ ಬರೀ ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಕೊಟ್ಟಿದ್ದೀರಿ. ಹೀಗೆ ಮಾಡೋದು ಸರೀನಾ ಎಂದು ಸರ್ಕಾರವನ್ನು ಪ್ರಶ್ನಿಸಿದರು.