ನಿಟ್ಟೂರು ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್‌ನಿಂದ ಶಾಲಾ ವಾಹನ ಕೊಡುಗೆ

ಮಂಗಳೂರು : ಕಳೆದ ಐದು ದಶಕಗಳಿಂದ ಕನ್ನಡ ಮಾಧ್ಯಮದಲ್ಲಿ ಸಂಪೂರ್ಣ ಉಚಿತವಾಗಿ ಪ್ರೌಢ ಶಿಕ್ಷಣ ನೀಡುತ್ತಾ ಬಂದ ಪ್ರಸ್ತುತ ‘ಸುವರ್ಣ ಪರ್ವ’ ಆಚರಿಸುತ್ತಿರುವ ಉಡುಪಿಯ ನಿಟ್ಟೂರು ಪ್ರೌಢ ಶಾಲೆಗೆ ಕರ್ಣಾಟಕ ಬ್ಯಾಂಕ್ ತನ್ನ ಸಿ.ಎಸ್.ಆರ್ ನಿಧಿಯಿಂದ 20 ಆಸನಗಳ ವಾಹನವನ್ನು ಕೊಡುಗೆಯಾಗಿ ನೀಡಿದೆ. ಜೂನ್ 18 ರಂದು ಮಂಗಳೂರಿನ ಪ್ರಧಾನ ಕಛೇರಿಯ ಮುಂಭಾಗದಲ್ಲಿ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಮ್.ಎಸ್. ಅವರು ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಹಾಗೂ ಶಾಸಕರಾದ ಕೆ. ರಘುಪತಿ ಭಟ್‌ರಿಗೆ ವಾಹನದ ಕೀ ನೀಡುವುದರ ಮೂಲಕ ಹಸ್ತಾಂತರಿಸಿದರು.

ಕೋವಿಡ್ – 19 ಈ ಸಂಕಷ್ಟ ಕಾಲದಲ್ಲೂ ಬಡ ಮಕ್ಕಳ ಶಿಕ್ಷಣದ ಮೇಲಿನ ಪ್ರೀತಿಯಿಂದ ಬ್ಯಾಂಕ್ ವಾಹನ ನೀಡುತ್ತಿರುವುದು ಸಾಮಾಜಿಕ ಸ್ಪಂದನೆಯ ದ್ಯೋತಕವಾಗಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ನುಡಿದು ಬ್ಯಾಂಕನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳಾದ ವೈ. ವಿ. ಬಾಲಚಂದ್ರ ರಾವ್, ಗೋಕುಲ್‌ದಾಸ್ ಪೈ, ಮಂಜುನಾಥ ಭಟ್, ಶ್ರೀನಿವಾಸ ದೇಶಪಾಂಡೆ ಹಾಗೂ ಸೊಸೈಟಿಯ ಉಪಾಧ್ಯಕ್ಷ ಎಮ್. ಗಂಗಾಧರ ರಾವ್, ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!