ಕುಂದಾಪುರ: ಊಟ ತಡವಾಗಿದ್ದನು ಪ್ರಶ್ನಿಸಿದಕ್ಕೆ ಬಾರ್ ಸಿಬಂದಿಯಿಂದ ಗ್ರಾಹಕನಿಗೆ ಹಲ್ಲೆ
ಕುಂದಾಪುರ ಎ.19(ಉಡುಪಿ ಟೈಮ್ಸ್ ವರದಿ): ಪಾರ್ಸೆಲ್ ಊಟ ತಡವಾದ ವಿಚಾರಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆ ನಡೆದಿರುವ ಘಟನೆ ಕೋಟೇಶ್ವರದ ಬಾರ್ ಆಂಡ್ ರೆಸ್ಟೋರೆಂಟ್ ವೊಂದರಲ್ಲಿ ನಡೆದಿದೆ.
ಈ ಬಗ್ಗೆ ಕುಂದಾಪುರದ ಪ್ರದೀಪ್ ಶೆಟ್ಟಿ ಎಂವರು ಪೊಲೀಸರಿಗೆ ದೂರು ನೀಡಿದ್ದು, ಅವರು ನೀಡಿರುವ ದೂರಿನ ಪ್ರಕಾರ, ಪ್ರದೀಪ ಶೆಟ್ಟಿ ಅವರು ಎ.17 ರಂದು ರಾತ್ರಿ 11 ಗಂಟೆಗೆ ಊಟ ಪಾರ್ಸೆಲ್ ತರಲೆಂದು ಕೋಟೇಶ್ವರದ ಬಾರ್ ಆಂಡ್ ರೆಸ್ಟೋರೆಂಟ್ ಗೆ ತೆರಳಿದ್ದರು. ಪಾರ್ಸೆಲ್ ತಡವಾದ ಹಿನ್ನೆಲೆ ಈ ಬಗ್ಗೆ ಪ್ರದೀಪ ಶೆಟ್ಟಿ ರವರು ಕೌಂಟರ್‍ನಲ್ಲಿ ವಿಚಾರಿಸಿದಾಗ ಆಗ ಕಿಚನ್ ಕೌಂಟರಿನಲ್ಲಿದ್ದ ಶರತ್ ಎಂಬಾತ ಇನ್ನು ಸ್ವಲ್ಪ ಹೊತ್ತು ಕಾಯಿರಿ ಎಂದಿದ್ದಾನೆ.
ಈ ವೇಳೆ ಶರತ್ ಹಾಗೂ ಪ್ರದೀಪ್ ಶೆಟ್ಟಿ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಶರತ್ ,ಪ್ರದೀಪ್ ಶೆಟ್ಟಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಮಾತ್ರವಲ್ಲದೆ, ಪ್ರದೀಪ್ ಶೆಟ್ಟಿ ವಾಪಾಸು ತಿರುಗಿ ಹೊರಟಾಗ ಯಾವುದೋ ಆಯುಧದಿಂದ ಅವರ ತಲೆಯ ಹಿಂಭಾಗಕ್ಕೆ ಹೊಡೆದು ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಘಟನೆಯಿಂದ ಪ್ರದೀಪ್ ಅವರ ತಲೆಯ ಹಿಂಭಾಗಕ್ಕೆ ಗಾಯವಾಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ