ಸಹಕಾರಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವೆ- ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಸಹಕಾರಿ ಕ್ಷೇತ್ರದಲ್ಲಿ ಸಹಕಾರವಿದ್ದಲ್ಲಿ ಸಾಧನೆಯ ಗುರಿ ಮುಟ್ಟಲು ಸಾಧ್ಯ , ಒಂದು ಸಂಸ್ಥೆ ಉನ್ನತ ಮಟ್ಟಕ್ಕೆ ಏರಲು  ಸಿಬ್ಬಂದಿ ಮುಖ್ಯ. ಸಂಸ್ಥೆಗೆ ದೊಡ್ಡ ಕಟ್ಟಡ ಮುಖ್ಯ ಅಲ್ಲ ಅದರ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಸೇವೆ ನೀಡಿದಾಗ ಸಂಸ್ಥೆ ಅಭಿವೃದ್ಧಿ ಈ ನಿಟ್ಟಿನಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ಉತ್ತಮ ಉದಾಹರಣೆ.

ಉಡುಪಿ ಇಂಡಸ್ಟ್ರೀಯಲ್ ಕೋ ,ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಹೋಟೆಲ್ ಓಷನ್ ಪರ್ಲ್ನಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭ ದಲ್ಲಿ ದಕ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ದೆ ಅಭಿನಂದಿಸಿ ಮಾತನಾಡಿದರು.

ನೌಕರರು ಪ್ರಾಮಾಣಿಕತೆಯಿಂದ ಸೇವೆ ಕೊಟ್ಟರೆ ತಾವೂ ಹಾಗೂ ತಮ್ಮ ಸಂಸ್ಥೆ ಉನ್ನತ ಮಟ್ಟಕೆ ಏರುವುದನ್ನು ಕಾಣಲೂ ಸಾಧ್ಯ , ಈ ನಿಟ್ಟಿನಲ್ಲಿ ಹಂತ  ಹಂತವಾಗಿ ಬೆಳೆದು ಇಂದು ರಾಜ್ಯ ಸಹಕಾರ ಮಹಾ ಮಂಡಲ ನೂತನ ನಿರ್ದೇಶಕರಾಗಿ ಆಯ್ಕೆಗೊಂಡ  ಜಯಕರ ಶೆಟ್ಟಿಯವರನ್ನು ಸಂಸ್ಥೆ ಪರವಾಗಿ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಪ್ರಾಮಾಣಿಕತೆ ,ಹಾಗೂ ಮಾನಸಾಕ್ಷಿ ಪೂರ್ವಕ ದುಡಿದಲ್ಲಿ ಅಧಿಕಾರ ನಮ್ಮನರಸಿ ಬರುತ್ತದೆ, ಸಹಕಾರಿ ಕ್ಷೇತ್ರದ ಸಮಸ್ಯೆಗಳನ್ನೂ ಪರಿಹರಿಸುವುದಾಗಿ ತಿಳಿಸಿದರು.  ಉಡುಪಿ ಇಂಡಸ್ಟ್ರೀಯಲ್ ಕೋ ,ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಅರುಣಕುಮಾರ ಶೆಟ್ಟಿ ಸ್ವಾಗತಿಸಿ,  ಉಪಾಧ್ಯಕ್ಷರಾದ ಮಟ್ಟಾರ್ ಗಣೇಶ್ ಕಿಣಿ ವಂದಿಸಿದರು. ಪ್ರಧಾನ ವ್ಯಸ್ಥಾಪಕ ರಾಜೇಶ್ ಹೆಗ್ದೆ ಕಾರ್ಯಕ್ರಮ ನಿರೂಪಿಸಿದರು. 

Leave a Reply

Your email address will not be published. Required fields are marked *

error: Content is protected !!