ಮಲ್ಲಿಗೆ ಗಿಡಗಳ ಮಾರುಕಟ್ಟೆ ಸೃಷ್ಠಿ ಮಾಡಿ:ರಾಮಕೃಷ್ಣ ಶರ್ಮ
ಕೋಟೇಶ್ವರ: 5-10 ಸೆಂಟ್ಸ್ನಷ್ಟು ಸ್ವಲ್ಪವೇ ಜಮೀನು ಇದ್ದಾಗಲೂ ವೈಜ್ಞಾನಿಕವಾಗಿ ಕಡಿಮೆ ಖರ್ಚಿನಲ್ಲಿ ಮಲ್ಲಿಗೆ ಹೂವನ್ನು ಮಾತ್ರವಲ್ಲ, ಗಿಡಗಳನ್ನೂ ಬೆಳೆಸಿ ವಾರಕ್ಕೆ ಸಾವಿರಾರು ರೂಪಾಯಿಗಳ ಸಂಪಾದನೆ ಮಾಡಬಹುದಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು.
ಅವರು ಕುಂಭಾಶಿ ಪಣ್ಹತ್ವಾರಬೆಟ್ಟು ಕೃಷಿಕೆ ಶ್ರೀಮತಿ ಪ್ರೇಮ ಪೂಜಾರಿಯವರ ಮನೆ ವಠಾರದಲ್ಲಿ ಭಾನುವಾರ ಮಲ್ಲಿಗೆ ಬೆಳೆಗಾರರ ಒಕ್ಕೂಟದ”ಕಟ್ಟೆ” ಉದ್ಘಾಟನೆಯ ಮಾರ್ಗದರ್ಶಕರಾಗಿ ಮಾತನಾಡಿದರು. ಕೃಷಿಕ ಶ್ರೀಧರ ದೇವಾಡಿಗ ಉದ್ಘಾಟಿಸಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ತೋಟಗಾರಿಕಾ ಇಲಾಖೆ ಅಧಿಕಾರಿ ಕುಚೇಲಯ್ಯ ವಹಿಸಿದ್ದರು. ಕುಂದಾಪುರ ಮಹಿಳಾ ಸಾಂತ್ವಾನ ಸಹಾಯವಾಣಿ ಅಧ್ಯಕ್ಷೆ ರಾಧಾದಾಸ್, ಜಿಲ್ಲಾ ಕೃಷಿಕ ಸಂಘ ಕುಂದಾಪುರ ವಲಯದ ರೋನಾಲ್ಡ್ ಡಿಸೋಜಾ ಆನಗಳ್ಳಿ, ಚಂದ್ರ ಪೂಜಾರಿ ಬಾಳೆಬೈಲು, ಸಂಯೋಜಕ ರಮೇಶ್ ಪೂಜಾರಿ ಕ್ಯಾಸನಮಕ್ಕಿ ಭಾಗವಹಿಸಿದ್ದರು.
ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವತಿ ಗಾಣಿಗ ಸ್ವಾಗತಿಸಿದರು. ರಮ್ಯ ಪೂಜಾರಿ, ಸುರೇಖಾ ಶಿವಾನಂದ, ಕವನ, ಆಶಾ, ಪಲ್ಲವಿ, ಮನು, ಕಿರಣ, ಗಣೇಶ್, ಸದಾನಂದ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಕೆ. ನೆಲ್ಲಿಬೆಟ್ಟು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.