ಚೀನಾಕ್ಕೆ ಆರ್ಥಿಕ ಹಿನ್ನಡೆ ತಂದು ಆರ್ಥಿಕ ಯುದ್ಧ ಮಾಡಲು ಸಿದ್ದರಾಗಿ: ಸಾಯಿ ಈಶ್ವರ್
ಉಡುಪಿ ಜೂ18: ಭಾರತ ಚೀನಾ ಗಡಿಯ ಗಾಲ್ವಾನ್ ಪ್ರದೇಶದಲ್ಲಿ ಚೀನಾ ಸೈನಿಕರ ದಾಳಿಗೆ ತುತ್ತಾಗಿ ವೀರ ಮರಣವಪ್ಪಿದ ಭಾರತೀಯ ಸೇನೆಯ ಇಪ್ಪತ್ತು ಸೈನಿಕರ ಗೌರವಾರ್ಥವಾಗಿ ಗುರೂಜಿ ಸಾಯಿಈಶ್ವರ್ ಇಂದು ಉಡುಪಿಯ ಹುತಾತ್ಮ ಸೈನಿಕರ ಯುದ್ಧ ಸ್ಮಾರಕಕ್ಕೆ ಬೇಟಿ ನೀಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರೂಜಿ ಸಾಯಿ ಈಶ್ವರ್ “ಗಡಿಯಲ್ಲಿ ವೀರ ಮರಣವನ್ನಪ್ಪಿದ ನಮ್ಮ ಸೈನಿಕರ ಸಾವು ವ್ಯರ್ಥವಾಗ ಬಾರದು. ನಮ್ಮಿಂದ ಯುದ್ದದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಆದರೆ ಇನ್ನು ಮುಂದೆ ಚೀನಾ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸುವ, ಚೀನಾ ದೇಶಕ್ಕೆ ಆರ್ಥಿಕ ಹಿನ್ನಡೆ ತಂದು ಪರೋಕ್ಷವಾಗಿ ಆರ್ಥಿಕ ಯುದ್ಧ ಮಾಡಲು ಸಿದ್ದರಾಗಿ” ಎಂದು ಯುವ ಜನತೆಗೆ ಕರೆ ನೀಡಿದರು. ಶಂಕರಪುರದ ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಪ್ರತಿವರ್ಷ ಉಡುಪಿಯ ಹಾಲಿ ಹಾಗು ಮಾಜಿ ಸೈನಿಕರನ್ನು ಗುರುತಿಸಿ ಸೈನಿಕ ದಂಪತಿಗಳನ್ನು ಮಂದಿರಕ್ಕೆ ಕರೆಸಿ ಧುನಿ ಯಾಗ ಮಾಡುತ್ತಿದ್ದು ಈ ವರ್ಷ ಕರೋನಾ ಲಾಕ್ ಡೌನ್ ಕಾರಣ ಧುನಿ ಯಾಗ ಆಯೋಜನೆ ಮಾಡಿರುವುದಿಲ್ಲ.
ಉಡುಪಿ ಹಿಂದೂ ಸಂಘಟಕ ರಾಧಾಕೃಷ್ಣ ಮೆಂಡನ್ ಮಾತನಾಡಿ “ನಮ್ಮ ಸೈನಿಕರನ್ನು ಮೋಸದಿಂದ ಕೊಲ್ಲಲಾಯಿತು, ಆದರೆ ಪ್ರತ್ಯುತ್ತರವಾಗಿ ನಮ್ಮ ತಕ್ಕ ಉತ್ತರ ನೀಡಿದ್ದಾರೆ. ಮೃತ ಯೋಧರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ” ಎಂದು ನುಡಿದರು. ಈ ಸಂದರ್ಭದಲ್ಲಿ ಪರ್ಕಳದ ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಜಯರಾಮ್ ಜಿ, ಮ್ಯಾಕ್ಸ್ ಸೌಂಡ್ಸ್ ಇದರ ಮಾಲಕರಾದ ಗಣೇಶ್ ಪಾಲನ್, ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದ ಮೇಲ್ವಿಚಾರಕ ಸತೀಶ್ ದೇವಾಡಿಗ, ಅಮಿತ್ ಬಜಪೆ ಉಪಸ್ಥಿತರಿದ್ದರು.