ಶಿರ್ವಾ: ‘ಕುಬೇರ್ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನೀಚರ್’ನ 6ನೇ ಬಾರಿಯ ಅದೃಷ್ಟ ಯೋಜನೆ ಆರಂಭ

ಶಿರ್ವಾ ಎ.17 (ಉಡುಪಿ ಟೈಮ್ಸ್ ವರದಿ): ಶಿರ್ವಾದ ಬಸ್ ನಿಲ್ದಾಣದ ಸಮೀಪದಲ್ಲಿರುವ ವಿಮಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ “ಕುಬೇರ್ ಎಂಟರ್ ಪ್ರೈಸಸ್” ನ ‘ಕುಬೇರ್ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನೀಚರ್’ ನಲ್ಲಿ 6ನೇ ಬಾರಿಯ ಕುಬೇರ್ ಅದೃಷ್ಟ ಯೋಜನೆ ಆರಂಭಗೊಂಡಿದೆ. ಮೇ.17ಕ್ಕೆ ಈ ಯೋಜನೆ ಆರಂಭಗೊಳ್ಳುತ್ತಿದ್ದು ಈ ಯೋಜನೆಯ ಮೂಲಕ ಗ್ರಾಹಕರು ವಾರಕ್ಕೊಮ್ಮೆ ಹಣ ಪಾವತಿಸಿ ಲಕ್ಕಿ ಬಂಪರ್ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಅಲ್ಲದೆ ಈ ಯೋಜನೆಯಲ್ಲಿ 85 ಮಂದಿಗೆ ಲಕ್ಕಿ ವಿಜೇತರಾಗುವ ಅವಕಾಶವಿದ್ದು, 15 ಮಂದಿ ಬಂಪರ್ ವಿಜೇತರಾಗಬಹುದು. ಅಲ್ಲದೆ 4 ಮಂದಿಗೆ ಮೆಗಾ ಬಂಪರ್ ವಿನ್ನರ್ ಆಗುವ ಅವಕಾಶ ಕೂಡಾ ಲಭ್ಯವಿದೆ.

ಈ ಯೋಜನೆಯಲ್ಲಿ ಸದಸ್ಯರಾಗಬಯಸುವವರು ಆರಂಭದಲ್ಲಿ 10 ರೂ. ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ಬಳಿಕ ವಾರಕ್ಕೊಮ್ಮೆ 150 ರೂ ಪಾವತಿಸುವ ಮೂಲಕ ಹಣ ಜಮೆ ಮಾಡಬಹುದು. ವಾರಕ್ಕೊಮ್ಮೆ ಡ್ರಾ ನಡೆಯಲಿದ್ದು ವಿಜೇತ ಸದಸ್ಯರು ವಾಷಿಂಗ್ ಮಿಶನ್, ಫ್ರಿಡ್ಜ್, ಟಿವಿ, ಸ್ವಿಂಗ್, ಸೋಫಾ, ಕಬಾಟ್ ಇತ್ಯಾದಿಗಳನ್ನು ಬಂಪರ್ ಬಹುಮಾನವಾಗಿ ಗೆಲ್ಲಬಹುದಾಗಿದೆ.

ಈ ಸ್ಕೀಮ್ ನ ವಿಶೇಷತೆ ಅಂದ್ರೆ 100 ಮಂದಿಯನ್ನು ಸೇರಿಸಿದ ಸದಸ್ಯರಿಗೆ ಬೈಕ್ ಉಡುಗೊರೆಯಾಗಿ ಸಿಗುತ್ತಿದ್ದು, 15 ಮಂದಿಯನ್ನು ಸೇರಿಸಿದ ಸದಸ್ಯರಿಗೆ ಒಂದು ಸ್ಕೀಮ್ ಕಾರ್ಡ್ ಉಚಿತವಾಗಿ ನೀಡಲಾಗುತ್ತದೆ. ಇನ್ನು ಕುಬೇರ್ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನೀಚರ್ ನಲ್ಲಿ  ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್ ವಸ್ತುಗಳು, ಫರ್ನೀಚರ್ ಗಳು, ಎಲೆಕ್ಟ್ರಾನಿಕ್ಸ್ ಸಲಕರಣೆಗಳು, ಪ್ಲಮ್ಮಿಂಗ್, ಸ್ಯಾನಿಟರಿ ಇತ್ಯಾದಿ ವಸ್ತುಗಳು ಸಿಗುತ್ತಿದ್ದು , ಟಿವಿಎಸ್ ಕ್ರೆಡಿಟ್ , ಬಜಾಜ್ ಫೈನಾನ್ಸ್ ಮೂಲಕ ವಸ್ತುಗಳು ಖರೀದಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9743918956 , 70191 60363 ನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!