ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಭಾರತಕ್ಕೆ ಮೂರು ಚಿನ್ನದ ಪದಕ
ಚೆನ್ನೈ: ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಮೂರು ಚಿನ್ನದ ಪದಕ ಲಭಿಸಿದೆ. ಎ.16 ರಂದು ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪ್ರಸಿದ್ಧ ಕುಸ್ತಿಪಟು ವಿನೇಶ್ ಫೋಗಟ್ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಚೀನಿ ಮತ್ತು ಜಪಾನಿನ ಪ್ರತಿಸ್ಪರ್ಧಿಗಳ ಅನುಪಸ್ಥಿತಿಯಲ್ಲಿ ವಿನೇಶ್ ಅವರು 53 ಕೆ.ಜಿ ವಿಭಾಗದಲ್ಲಿ ಒಂದೂ ಪಾಯಿಂಟ್ ಕಳೆದುಕೊಳ್ಳದೆ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಕ್ರೀಡಕೂಟದಲ್ಲಿ ದಿವ್ಯಾ ಕಕ್ರನ್ ಅವರು 72ಕೆ.ಜಿ ವಿಭಾದಲ್ಲಿ ಚಿನ್ನ, ಅನ್ಶು ಮಲಿಕ್ 57 ಕೆಜಿ ವಿಭಾದಲ್ಲಿ ಚಿನ್ನ ಹಾಗೂ ಸಾಕ್ಷಿ ಮಲಿಕ್ 65 ಕೆ.ಜಿ ವಿಭಾದಲ್ಲಿ ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ.
ಅಲ್ಲದೆ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ದಿವ್ಯಾ ಅವರು ಪಾತ್ರವಾಗಿದ್ದಾರೆ. ಎ.15 ರಂದು ನಡೆದ ಕ್ರೀಡಾ ಕೂಟದಲ್ಲಿ ಸರಿತಾ ಮೊರ್ 59 ಕೆ.ಜಿ ವಿಭಾದಲ್ಲಿ ಚಿನ್ನದ ಪದಕ ಗಳಿಸಿದ್ದು, ಸೀಮಾ ಬಿಸ್ಲಾ 50 ಕೆ.ಜಿ ವಿಭಾದಲ್ಲಿ ಮತ್ತು ಪೂಜಾ 76 ಕೆ.ಜಿ ವಿಭಾದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ಆವೃತ್ತಿಯಲ್ಲಿ ಭಾರತ ಒಟ್ಟು ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದೆ. ವಿಶೇಷ ಅಂದ್ರೆ ಈ ಸಾಧನೆ ಮಹಿಳೆಯರ ವಿಭಾಗದ ಸ್ಪರ್ಧೆಯಿಂದಲೇ ನಡೆದಿರುವುದಾಗಿದೆ.