ಶಿರ್ವ: ಮುಂಬೈಯ ಫುಟ್ ಬಾಲ್ ಕೋಚ್ ಮೃತ್ಯು
ಶಿರ್ವ: ಅಸ್ವಸ್ಥಗೊಂಡ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರ್ವದಲ್ಲಿ ನಡೆದಿದೆ.
ರಾಜೇಶ ಬಂಗೇರ (39) ಮೃತಪಟ್ಟವರು ಇವರು ಮುಂಬೈಯಲ್ಲಿ ಫುಟ್ ಬಾಲ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದವರು ಊರಿಗೆ ಬಂದು ಮೂರು ದಿನಗಳ ಹಿಂದೆ ಹೆಂಡತಿ ಮನೆಯಾದ ಶಿರ್ವಾಕ್ಕೆ ಬಂದಿದ್ದರು.
ಅದರಂತೆ ಎ.15 ರಂದು ರಾಜೇಶ ಬಂಗೇರವರು ತನ್ನ ಹೆಂಡತಿ, ಮಗನೊಂದಿಗೆ ಮಾತನಾಡುತ್ತಿರುವಾಗ ರಾತ್ರಿ 11.15 ರ ಸುಮಾರಿಗೆ ಒಮ್ಮಲೇ ಅಸ್ವಸ್ಥಗೊಂಡಿದ್ಧರು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.