ಮದುವೆ, ರಾಜಕೀಯ ಕಾರ್ಯಕ್ರಮಕ್ಕೆ 200 ಮಂದಿಗೆ ಗರಿಷ್ಠಮಿತಿ – ಧಾರ್ಮಿಕ ಆಚರಣೆಗೆ ಸಂಪೂರ್ಣ ನಿಷೇಧ!
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೋವಿಡ್ ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ವಿಪತ್ತು ನಿರ್ವಹಣಾ ಕಾಯ್ದೆಯಡಿ ಗುಂಪು ಸೇರುವ ಕಾರ್ಯಕ್ರಮಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ರಾಜ್ಯದಾದ್ಯಂತ ಸಾರ್ವಜನಿಕ ಸಮಾರಂಭಗಳು, ಆಚರಣೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜನರಿಗೆ ಮಿತಿ ಹೇರಲಾಗಿದೆ.
* ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ 200 ಜನ ಮತ್ತು ಕಲ್ಯಾಣ ಮಂಟಪ, ಹಾಲ್ ಸೇರಿದಂತೆ ಒಳಾಂಗಣ ಮದುವೆ ಕಾರ್ಯಕ್ರಮಕ್ಕೆ 100 ಜನರ ಮಿತಿ ಹೇರಲಾಗಿದೆ.
* ಜನ್ಮದಿನ ಮತ್ತು ಇತರೆ ಆಚರಣೆಗಳಿಗೆ ತೆರೆದ ಪ್ರದೇಶದಲ್ಲಿ 50 ಜನರ ಮಿತಿ ಮತ್ತು ಒಳಾಂಗಣ ಕಾರ್ಯಕ್ರಮಕ್ಕೆ 25 ಜನರ ಮಿತಿ ಹೇರಲಾಗಿದೆ.
* ನಿಧನರಾದವರ ಅಂತಿಮ ದರ್ಶನದಲ್ಲಿ 50 ಜನರು ಮಾತ್ರ ಪಾಲ್ಗೊಳ್ಳಬೇಕು. ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ 25 ಜನರ ಮಿತಿ ವಿಧಿಸಲಾಗಿದೆ.
* ಇತರ ಕಾರ್ಯಕ್ರಮಗಳಲ್ಲಿ 50 ಜನ ಮೀರಬಾರದು. ಧಾರ್ಮಿಕ ಆಚರಣೆಗಳು ಮತ್ತು ಸಮಾರಂಭಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.
* ತೆರೆದ ಪ್ರದೇಶಗಳಲ್ಲಿ ನಡೆಯುವ ರಾಜಕೀಯ ಕಾರ್ಯಕ್ರಮಗಳಲ್ಲಿ 200 ಜನರಿಗಿಂತ ಹೆಚ್ಚು ಜನರು ಭಾಗವಹಿಸಬಾರದು.