ಉಡುಪಿ- 163, ದ.ಕ.- 466 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಗೈರು

ಬೆಂಗಳೂರು: ಯಾವುದೇ ಅಹಿತಕರ ಘಟನೆಯಿಲ್ಲದೇ, ಪ್ರಶ್ನೆ ಪತ್ರಿಕೆಗಳ‌ ಸೋರುವಿಕೆಯಿಲ್ಲದೇ ಮತ್ತು‌ ಉತ್ತರ ಪತ್ರಿಕೆಗಳ ನಕಲು ಪ್ರಕರಣಗಳಿಲ್ಲದೇ‌ 2020 ರ ಪಿಯುಸಿ ಪರೀಕ್ಷೆಗಳು ಸಂಪನ್ನವಾಗಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಗುರುವಾರ ನಡೆದ ಇಂಗ್ಲಿಷ್ ಪರೀಕ್ಷೆಯ ಬಳಿಕ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಆದರೆ ಕೋವಿಡ್-19 ಭಯದಿಂದ 27,022 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 5,95,997 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆದರೆ 5,68,975 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜೊತೆಗೆ ಹೊರ ರಾಜ್ಯದ 1,889 ವಿದ್ಯಾರ್ಥಿಗಳ ಪರೀಕ್ಷೆ ಬರೆದರೆ, 18,529 ವಿದ್ಯಾರ್ಥಿಗಳು ಅಂತರ್ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಪಿಯುಸಿ ಬೋರ್ಡ್ ಅಧಿಕೃತ ಮಾಹಿತಿ ನೀಡಿದೆ.

ಪಿಯುಸಿ ಪರೀಕ್ಷೆಯಲ್ಲಿ ಉಳಿದಿದ್ದ ಕೊನೆಯ ಇಂಗ್ಲಿಷ್ ಪರೀಕ್ಷೆ ಇಂದು ನಡೆದಿದೆ. ರಾಜ್ಯದಾದ್ಯಂತ 1016 ಕೇಂದ್ರಗಳಲ್ಲಿ ಸುಮಾರು 5,95,000 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು.

ಬೆಂಗಳೂರು ಉತ್ತರ – 1646 ಬೆಂಗಳೂರು ದಕ್ಷಿಣ- 1675, ಬಿಜಾಪುರ- 1476
ಬೀದರ್- 899 , ದಾವಣಗೆರೆ- 1292, ಚಿತ್ರದುರ್ಗ- 1040 ,ಚಿಕ್ಕಮಗಳೂರು- 377
ಗದಗ- 669 ,ಹಾವೇರಿ- 457, ಧಾರವಾಡ- 917 ,ಬೆಂಗಳೂರು ಗ್ರಾಮಾಂತರ- 341
ರಾಮನಗರ- 488, ಬಳ್ಳಾರಿ- 1261, ಚಿಕ್ಕೋಡಿ- 1359, ಬೆಳಗಾವಿ- 1044
ಬಾಗಲಕೋಟೆ- 696 ಬಿಜಾಪುರ- 1476, ಬೀದರ್- 899, ದಾವಣಗೆರೆ- 1292
ಚಿತ್ರದುರ್ಗ- 1040, ಚಿಕ್ಕಮಗಳೂರು- 377, ಗದಗ- 669,ಹಾವೇರಿ- 457,ಧಾರವಾಡ- 917 ಕಲಬುರಗಿ- 1750, ಯಾದಗಿರಿ- 568, ಹಾಸನ- 535, ಚಿಕ್ಕಬಳ್ಳಾಪುರ- 442, ಕೋಲಾರ್- 730, ಚಾಮರಾಜನಗರ- 268, ಮೈಸೂರು- 1401, ಮಂಡ್ಯ- 682 , ಉತ್ತರ ಕನ್ನಡ- 435
ಕೊಪ್ಪಳ- 463, ರಾಯಚೂರು- 1347, ದಕ್ಷಿಣ ಕನ್ನಡ- 466, ಉಡುಪಿ- 163, ಶಿವಮೊಗ್ಗ- 538, ತುಮಕೂರು- 1457, ಕೊಡಗು- 140 ಗೈರಾಗಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಎಲ್ಲಾ ಕೇಂದ್ರದಲ್ಲಿ ಮಾಡಿದ್ದೆವು. ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್ ಮಾಡಿದ್ದೇವೆ. ಯಾವುದೇ ಸಮಸ್ಯೆ ಇಲ್ಲದೆ ಪರೀಕ್ಷೆ ಮುಕ್ತಾಯವಾಗಿದೆ. ಪರೀಕ್ಷೆಗೆ ಗೈರಾದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!