ನಂದಳಿಕೆ: ಅಮ್ಮ ಮಗಳಿಗೆ ಕ್ಯಾನ್ಸರ್, ಕುಟಂಬಕ್ಕೆ ಬೇಕಿದೆ ದಾನಿಗಳ ಸಹಾಯಸ್ತ

ಉಡುಪಿ, ಏ.16(ಉಡುಪಿ ಟೈಮ್ಸ್ ವರದಿ): ಒಂದೆಡೆ ಬಡತನ ಮತ್ತೊಂದೆಡೆ ಕ್ಯಾನ್ಸರ್ ನ ಕರಿಛಾಯೆ. ಈ ಕುಟುಂಬದ ಕಷ್ಟ ಕೇಳಿದರೆ ಎಂತವರಿಗೂ ಮರುಕ ಹುಟ್ಟದೇ ಇರಲ್ಲ. ನಂದಳಿಕೆ ಗ್ರಾಮದ ಅಬ್ಬನಡ್ಕ ಬಳಿ 85 ವರ್ಷದ ತಾಯಿ ಸುಂದರಿ ಶೆಟ್ಟಿಗಾರ್ ರೊಂದಿಗೆ ಜೀವನ ನಡೆಸುತ್ತಿರುವ ವಿಜಯಲಕ್ಷ್ಮೀ ಶೆಟ್ಟಿಗಾರ್ ಅವರದ್ದು ತೀರಾ ಕಡು ಬಡತನದ ಕುಟುಂಬ.

ಇಂತಹ ಪರಿಸ್ಥಿತಿಯಲ್ಲಿ ವಿಜಯಲಕ್ಷ್ಮೀ ಶೆಟ್ಟಿಗಾರ್ ಅವರು ಕಾನ್ಸರ್ ಕಾಯಿಲೆಗೆ ತುತ್ತಾಗಿರುವುದು ಕುಟುಂಬಕ್ಕೀಗ ಬರ ಸಿಡಿಲು ಬಡಿದಂತಾಗಿದೆ. ಅವರ ಚಿಕಿತ್ಸೆಗೆ ಲಕ್ಷಾಂತರ ಮೊತ್ತದ ಅವಶ್ಯಕತೆಯಿದ್ದು. ಆಸ್ಪತ್ರೆ ವೆಚ್ಚ ಭರಿಸುವುದು ಈ ಕುಟುಂಬಕ್ಕೆ ಕಷ್ಟ ಸಾಧ್ಯವಾಗಿದೆ. ವಿಜಯಲಕ್ಷ್ಮೀ ಶೆಟ್ಟಿಗಾರ್ ಅವರು ಕ್ಯಾನ್ಸರ್ ನಿಂದ ಗುಣಮುಖರಾಗಿ ತಮ್ಮ ಬಡ ಕುಟುಂಬಕ್ಕೆ ಬೆಳಕಾಗಿ ತಮ್ಮ ತಾಯಿಗೆ ಆಸರೆಯಾಗಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ಸಹಾಯಕ್ಕೆ ಸಹೃದಯಿ ದಾನಿಗಳ ಹಾಗೂ ಸಂಘ ಸಂಸ್ಥೆಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ ಇವರು.

ಈ ನಡುವೆ ಇವರ ಕಷ್ಟದ ಪರಿಸ್ಥಿತಿಯನ್ನು ಮನಗಂಡ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆಯಾದ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನ ನೇತೃತ್ವದಲ್ಲಿ ವೈದ್ಯಕೀಯ ನೆರವಿಗೆ ಸಹಾಯಧನ ಮೊತ್ತವನ್ನು ಅವರ ಮನೆಗೆ ತೆರಳಿ ಸಂಘದ ಪದಾಧಿಕಾರಿಗಳು ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬೋಳ ಉದಯ ಅಂಚನ್, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ, ಅಬ್ಬನಡ್ಕ ಸತೀಶ್ ಪೂಜಾರಿ, ಮಾಜಿ ಕಾರ್ಯದರ್ಶಿ ಅಬ್ಬನಡ್ಕ ಸುರೇಶ್ ಪೂಜಾರಿ ಮೊದಲಾದವರಿದ್ದರು.   

Leave a Reply

Your email address will not be published. Required fields are marked *

error: Content is protected !!