ಉಡುಪಿ ಬೈಕ್ ಕಳವು ಪ್ರಕರಣ: ಸೂಪರ್ ಮಾರ್ಕೆಟ್ ಸೇಲ್ಸ್ ಮ್ಯಾನ್ ಬಂಧನ

ಉಡುಪಿ ಎ.15( ಉಡುಪಿ ಟೈಮ್ಸ್ ವರದಿ): ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು  ಪೊಲೀಸರು ಬಂಧಿಸಿದ್ದಾರೆ.  ಬೆಳಗಾಂನ ಸಾಗರ್ ಸುದೀರ್ ಹರ್ಗಾಪುರೆ ( 26)ಬಂಧಿತ ಆರೋಪಿ. ಬಂಧಿತನಿಂದ 2 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದು 1 ಬೈಕ್‌ನ್ನು ಆರೋಪಿತನು  ಮೈಸೂರಿನ ಲಷ್ಕರ್  ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದೆಂದು ಹೇಳಿದ್ದು ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಫೆ. 24. ರಂದು ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ಬಸವರಾಜ್ ಎಂಬವರು ಇರಿಸಿದ್ದ ಬೈಕ್ ಹಾಗೂ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಎ.14 ರಂದು ಆರೋಪಿ ‌ಉಡುಪಿಯ ಐರೋಡಿಕರ್ ಜಂಕ್ಷನ್ ಬಳಿ ಇರುವ ತಲ್ಲೂರು ವೈನ್ಸ್ ಎದುರು ಇರುವ ಬಗ್ಗೆ ಮಾಹಿತಿ ಪಡೆದ ಮೇರೆಗೆ ಮೇಲಾಧಿಕಾರಿಯವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ  ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಶಾಖೆಯ ಪೊಲೀಸ್ ಉಪ-ನಿರೀಕ್ಷಕರಾದ ವಾಸಪ್ಪ ನಾಯ್ಕ್, ಸಿಬ್ಬಂದಿಯವರಾದ  ಮರಿಗೌಡ, ಜೀವನ್, ಸಂತೋಷ ರಾಠೋಡ್, ಮಾಲ್ತೇಶ್ ರವರೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯು ಬಿ.ಎಸ್.ಸಿ ಪದವಿ ಅನುತ್ತೀರ್ಣನಾಗಿದ್ದು ಮಂಗಳೂರು ಮತ್ತು ಉಡುಪಿಯಲ್ಲಿ ಕೆಲವು ಖಾಸಗಿ ಮಾಲ್‌ಗಳಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ, ಉಡುಪಿಯ ಚಾರ್ವಿ ಪಿ.ಜಿಯಲ್ಲಿ ವಾಸವಾಗಿದ್ದು, ಇತನು ಕೀ ಸಮೇತವಾಗಿ ಬಿಟ್ಟು ಹೋಗುವ ಬೈಕ್‌ನ್ನು ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!