ದೈವಾರಾಧನೆ ನಡೆಸಲು ಅವಕಾಶ ನೀಡಿ- ಉಡುಪಿ ಜಿಲ್ಲಾ ಅಖಿಲ ಭಾರತ ತುಳುನಾಡ್ ದೈವಾರಾಧಕರ ಒಕ್ಕೂಟ ಮನವಿ

ಉಡುಪಿ, ಎ.15(ಉಡುಪಿ ಟೈಮ್ಸ್ ವರದಿ): ಉಡುಪಿ ನಗರದಲ್ಲಿ ಸರ್ಕಾರದ ನಿಯಮದಂತೆ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಸ್ವಲ್ಪ ಜನ ಸೇರಿಕೊಂಡು ದೈವಾರಾಧನೆ ನಡೆಸಲು ಅವಕಾಶ ನೀಡುವಂತೆ ಉಡುಪಿ ಜಿಲ್ಲಾ ಅಖಿಲ ಭಾರತ  ತುಳುನಾಡ್  ದೈವಾರಾಧಕರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಅವರು, ಕೋವಿಡ್ 19 ವೈರಾಣುವನ್ನು ತಡೆಗಟ್ಟಲು ಸರ್ಕಾರದ ಆದೇಶವನ್ನು ಒಪ್ಪಿಕೊಂಡು ಎಲ್ಲಾ ದೈವಸ್ಥಾನದ ಧಾರ್ಮಿಕ ಕಾರ್ಯಕ್ರಮ ನೇಮೋತ್ಸವ ಇನ್ನಿತರ ಸಮಾರಂಭಗಳನ್ನು ರದ್ದು ಮಾಡಲಾಗಿದೆ. ಅದರಿಂದ ಹೋದ ಸಲವೂ ಸರ್ಕಾರದಿಂದ ಯಾವುದೇ ಸೌಲತ್ತುಗಳು ಆಗಲಿ ಪ್ಯಾಕೆಜ್ ಆಗಲಿ ದೈವದ ಕೆಲಸ ನಿರ್ವಹಿಸುವ ವರ್ಗದವರಿಗೆ ಪರಿಹಾರ ಸಿಕ್ಕಲಿಲ್ಲ.

ಎಲ್ಲರೂ ಸಾಲ ಮೂಲ ಮಾಡಿ ಜೀವನ ನಡೆಸಿದ್ದಾರೆ. ಇದೀಗ ಈ ವರ್ಷವೂ ಕೂಡ ದೈವ ಚಾಕ್ರಿ ಮಾಡುವವರಿಗೆ ದೊಡ್ಡ ಹೊಡೆತ ಬಿದ್ದಿದೆ. ಯಾವುದೇ ವ್ಯವಹಾರ, ನಾವು ಕೆಲಸವಿಲ್ಲದೆ ಯಾವುದೇ ಆದಾಯವೂ ಇಲ್ಲದೆ. ಪಿಎಫ್ ಹಾಗೂ ಬೋನಸ್, ಆರೋಗ್ಯ ವಿಮ ಸೀಮಿತ ಸೌಲಭ್ಯಗಳು ಇಲ್ಲದೆ ಇರುವುದರಿಂದ ದೈವ ಚಾಕ್ರಿ ವೃತ್ತಿಯಲ್ಲಿ ಜೀವನ ಸಾಗಿಸಬೇಕಾಗಿದೆ.

ಪರಿಣಾಮವಾಗಿ ಇದನ್ನೇ ನಂಬಿಕೊಂಡು ಬಂದಿರುವ ದೈವ ಚಾಕ್ರಿ ವರ್ಗ ಜೀವನವನ್ನು ನೀಗಿಸುವುದು ಕಷ್ಟವಾಗಿದೆ. ಅದ್ದರಿಂದ ಸರ್ಕಾರದ ನಿಯಮದಂತೆ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಸ್ವಲ್ಪ ಜನ ಸೇರಿ ದೈವಾರಾಧನೆ ನಡೆಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿಸುತ್ತಿದ್ದು, ರಾಜ್ಯ ಸರ್ಕಾರ ಸಮಸ್ಯೆಯನ್ನು ಅರಿತು ತಕ್ಷಣ ನಮಗೆ ಸ್ಪಂದಿಸಬೇಕಾಗಿದೆ ಕೇಳಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!