ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿಯ ಖಜಾನೆ ತುಂಬಿದ್ದು ಹೇಗೆ?: ಕಾಂಗ್ರೆಸ್ ಟ್ವೀಟ್‌

ಬೆಂಗಳೂರು: “ಚಿಕ್ಕಮಗಳೂರಿನಲ್ಲಿ ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಎನ್ನುವ ಮತಿಗೆಟ್ಟ ಅಸಾಮಿಯ ಖಜಾನೆ ಕೆಲವೇ ವರ್ಷದಲ್ಲಿ ತುಂಬಿದ್ದು ಹೇಗೆ?” ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ಚಿಕ್ಕಮಗಳೂರಿನಲ್ಲಿ ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಎನ್ನುವ ಮತಿಗೆಟ್ಟ ಅಸಾಮಿಯ ಖಜಾನೆ ಕೆಲವೇ ವರ್ಷದಲ್ಲಿ ತುಂಬಿದ್ದು ಹೇಗೆ? ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಕೋಟ್ಯಾಂತರ ಬೆಲೆಯ ಆಸ್ತಿ ಬಂದಿದ್ದು ಹೇಗೆ? ಲೋಕಾಯುಕ್ತ ಕೋರ್ಟಿನಲ್ಲಿ 409,420, 120, 463, 466, 120B ಪ್ರಕರಣಗಳು ಇರುವುದೇಕೆ? ಲೂಟಿ ರವಿ ಉತ್ತರಿಸುವರೇ?” ಎಂದು ಕೇಳಿದೆ.

ಜನತೆ ಸಂಕಷ್ಟದಲ್ಲಿದ್ದಾರೆ, ಪ್ರತಿ ಕುಟುಂಬಕ್ಕೆ 10 ಸಾವಿರ ನೀಡಿ ಎನ್ನುವ ಸಿದ್ದರಾಮಯ್ಯನವರ ಸಲಹೆಗೆ ಬುದ್ದಿ ಭ್ರಮಣೆಯಾದವರಂತೆ ಮಾತನಾಡುವ ಡಿಸಿಎಂ ಅಶ್ವಥ್ ನಾರಾಯಣ ಮತ್ತು ಸಿ.ಟಿ.ರವಿ ಅವರೇ, ‘ಪಿಎಂ ಕೇರ್ಸ್, ಕರೋನಾ ಪ್ಯಾಕೇಜ್, 20 ಲಕ್ಷ ಕೋಟಿ ಪ್ಯಾಕೇಜ್’ ಇವೆಲ್ಲ ಎಲ್ಲಿ ಹೋದವು ಎಂದು ಹೇಳಿ, ಇಲ್ಲವೇ ಅವೆಲ್ಲ ಬೋಗಸ್ ಎಂದು ಒಪ್ಪಿಕೊಳ್ಳಿ” ಎಂದು ಹೇಳಿದೆ.”ರಾಜ್ಯದಲ್ಲಿ ಕರೋನಾ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆಕ್ಸಿಜನ್ ಕೊರತೆ, ವೈದ್ಯರ ಕೊರತೆ, ಆಂಬ್ಯುಲೆನ್ಸ್ ಕೊರತೆ, ಪಿಪಿಇ ಕಿಟ್ ಕೊರತೆ, ಬೆಡ್‌ಗಳ ಕೊರತೆ, ಐಸಿಯು ಕೊರತೆ, ಸ್ಮಶಾನದಲ್ಲಿ ಜಾಗದ ಕೊರತೆ, ಸರ್ಕಾರಕ್ಕೆ ಮನಿಷ್ಯತ್ವದ ಕೊರತೆ” ಬಿಜೆಪಿ ಸರ್ಕಾರದ ಲಜ್ಜೆಗೆಟ್ಟ ಆಡಳಿತದಲ್ಲಿ ರಾಜ್ಯ ಸ್ಮಶಾನವಾಗುವತ್ತ ಸಾಗುತ್ತಿದೆ” ಎಂದಿದೆ.

Leave a Reply

Your email address will not be published. Required fields are marked *

error: Content is protected !!