ಕೆಎಂಸಿಯಲ್ಲಿ ವೆಂಟಿಲೇಟರ್, ಹಾಸಿಗೆಗಳ ತೀವ್ರ ಕೊರತೆ- ದೃಢೀಕರಿಸಿ ಬರುವಂತೆ ಸೂಚನೆ

ಮಣಿಪಾಲ, ಏ.14 : ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ದಿನದಿಂದ ದಿನಕ್ಕೆ ಐಸಿಯು ಅವಶ್ಯವಿರುವ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸದ್ಯದ ಮಟ್ಟಿಗೆ ತೀವ್ರ ನಿಘಾ ಘಟಕ (ಐಸಿಯು) ಹಾಸಿಗೆಗಳು ಮತ್ತು ವೆಂಟಿಲೇಟರ್ ಹಾಸಿಗೆಗಳ ತೀವ್ರ ಕೊರತೆಯಂಟಾಗಿದೆ.

ಆದ್ದರಿಂದ ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ರೋಗಿಗಳು / ರೋಗಿಗಳ ಆರೈಕೆದಾರರು, ಆಂಬ್ಯುಲೆನ್ಸ್, ಸೇವಾ ಪೂರೈಕೆದಾರರು ತಮ್ಮ ಸ್ಥಳದಿಂದ ಹೊರಡುವ ಮುನ್ನ ದೂರವಾಣಿ ಸಂಖ್ಯೆ 9686692603 ಗೆ ಕರೆ ಮಾಡುವುದರ ಮೂಲಕ, ಕಸ್ತೂರ್ಬಾ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕ (ಐಸಿಯು) ಹಾಸಿಗೆಗಳು ಮತ್ತು ವೆಂಟಿಲೇಟರ್ ಹಾಸಿಗೆಗಳು ಲಭ್ಯವಿದೆಯೇ ಎಂದು ದೃಢೀಕರಿಸಿಕೊಂಡು ಆಸ್ಪತ್ರೆಗೆ ಬರಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ವಿನಂತಿಸಿದ್ದಾರೆ.

ಐಸಿಯು ಹಾಸಿಗೆಗಳು ಮತ್ತು  ವೆಂಟಿಲೇಟರುಗಳ ತೀವ್ರ ಕೊರತೆಯ ದೃಷ್ಟಿಯಿಂದ ಈ ಕರೆ ಮತ್ತು ದೃಢೀಕರಣವು ಅವಶ್ಯಕವಾಗಿದೆ. ಇದರಿಂದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ತಮ್ಮ ರೋಗಿಗಳಿಗೆ ಆಗುವ ಅನಾನುಕೂಲತೆಯನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ವೈದ್ಯಕೀಯ ಅಧೀಕ್ಷಕರು ಕೋರಿದ್ದಾರೆ.

1 thought on “ಕೆಎಂಸಿಯಲ್ಲಿ ವೆಂಟಿಲೇಟರ್, ಹಾಸಿಗೆಗಳ ತೀವ್ರ ಕೊರತೆ- ದೃಢೀಕರಿಸಿ ಬರುವಂತೆ ಸೂಚನೆ

Leave a Reply

Your email address will not be published. Required fields are marked *

error: Content is protected !!