ಆಂಬ್ಯುಲೆನ್ಸ್ ಮತ್ತು ಸ್ಕೂಟರ್ ನಡುವೆ ಅಪಘಾತ-ಬಾಲಕ ಮೃತ್ಯು,ಓರ್ವ ಗಂಭೀರ
ಕಾಸರಗೋಡು, ಏ.14: ಆಂಬ್ಯುಲೆನ್ಸ್ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸಹಸವಾರ ಬಾಲಕ ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ.
ಬದಿಯಡ್ಕ ಪೆರಡಾಲದ ಅಬ್ದುಲ್ ಶಾಹಿಲ್ (16) ಮೃತಪಟ್ಟ ಬಾಲಕಘಟನೆ ಯಲ್ಲಿ ಸ್ಕೂಟರ್ ಸವಾರ ಮೂಕಂಪಾರೆಯ ಅಬ್ದುಲ್ ಸಮದ್ (19) ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಕ್ಕಿನಡ್ಕ ವೈದ್ಯಕೀಯ ಕಾಲೇಜಿಗೆ ತೆರಳುತ್ತಿಸಿದ್ದ ಆಂಬ್ಯುಲೆನ್ಸ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶಾಹಿಲ್ ಮೃತ ಪಟ್ಟಿದ್ದಾರೆ. ಬದಿಯಡ್ಕ ಪೊಲೀಸರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ