ಚೀನಾದ ಅಪ್ಲಿಕೇಶನ್‌ ಡಿಲೀಟ್ ಮಾಡುವ ಅಭಿಯಾನ ಆರಂಭಿಸ ಬೇಕಾಗಿದೆ

ಉಡುಪಿ: ನಡುರಾತ್ರಿಯಲ್ಲಿ ನುಗ್ಗಿಬಂದು ನಮ್ಮ ಸೈನಿಕರ ಮೇಲೆ ಆಕ್ರಮಣ ಮಾಡಿದ ಚೀನಾದ ಹೇಡಿ ಕೃತ್ಯವನ್ನು ಖಂಡಿಸುತ್ತೇನೆ. ಹುತಾತ್ಮರಾದ ನಮ್ಮ ಸೈನಿಕರೆಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.


ಭಾರತದ 130 ಕೋಟಿ ಜನರೂ ಕೂಡ ಚೀನಾದ ವಿರುದ್ಧದ ಹೋರಾಟದಲ್ಲಿ ಯೋಧರಾಗಬೇಕಿದೆ ಚೀನಾದ ಉತ್ಪನ್ನಗಳನ್ನು ನಾನು ಬಳಕೆ ಮಾಡುವುದಿಲ್ಲವೆಂಬ ಪ್ರಮಾಣದೊಂದಿಗೆ ಭಾರತ ಮಾತೆಗೋಸ್ಕರ ತಮ್ಮ ಪ್ರಾಣವನ್ನು ಅರ್ಪಿಸುವ ನಮ್ಮ ಸೈನಿಕರಿಗೆ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನಕ್ಕೆ ಮುಂದಾಗಬೇಕಿದೆ.

 
ಪದೇ ಪದೇ ನಮ್ಮ ದೇಶದ ತಂಟೆಗೆ ಬರುವ ಚೀನಾದ ಕಪಟ ಬುದ್ಧಿಗೆ ಸರಿಯಾದ  ಪಾಠವಾಗಬೇಕಿದೆ. ಭಾರತದ ಯುವ ಸಮುದಾಯ ತಮ್ಮ ಮೊಬೈಲ್‌ಗಳಲ್ಲಿ ಉಪಯೋಗಿಸುವ ಚೀನಾದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವುದರ ಮುಖೇನ ಬಹುದೊಡ್ಡ ಅಭಿಯಾನವನ್ನು ಆರಂಬಿಸಬೇಕಿದೆ.


ಪ್ರತಿಯೊಬ್ಬರೂ ಚೀನಾ ಉತ್ಪನ್ನಗಳು ಬಹಿಷ್ಕರಿಸುವುದರಜೊತೆಗೆ  ಸ್ವದೇಶಿ ಉತ್ಪನ್ನಗಳನ್ನು ಬಳಸಿ ಪ್ರೋತ್ಸಾಹಿಸೋಣ ಎಂದು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!