ಉದ್ಯಾವರ: ನೂತನವಾಗಿ ಶುಭಾರಂಭಗೊಂಡ ‘ಬೇಕ್ ಟ್ರೀಟ್’ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

ಉಡುಪಿ ಏ.12(ಉಡುಪಿ ಟೈಮ್ಸ್ ವರದಿ) : ಶುಚಿ ರುಚಿಯಾದ ಬೇಕರಿ ಉತ್ಪನ್ನಗಳನ್ನು ತಿನ್ನಬೇಕು ಎನ್ನುವ ಉದ್ಯಾವರದ ಜನತೆಗೆ ಒಂದು ಶುಭಸುದ್ದಿ ನಾವು ನೀಡುತ್ತಿದ್ದೇವೆ. ಉದ್ಯಾವರದಲ್ಲಿ ನೂತನವಾಗಿ ಶುಭಾರಂಭಗೊಂಡಿದೆ ‘ಬೇಕ್ ಟ್ರೀಟ್‘ ಎಂಬ ನೂತನ ಬೇಕರಿ.

ಫೆ.22 ರಂದು ಆರಂಭಗೊಂಡ ‘ಬೇಕ್ ಟ್ರೀಟ್‘ ಉದ್ಯಾವರ ಭಾಗದ ಜನರಿಗೆ ರುಚಿ ಶುಚಿಯಾದ ಬೇಕರಿ ಉತ್ಪನ್ನಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದು ಈಗಾಗಲೇ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬೇಕ್ ಟ್ರೀಟ್ ನಲ್ಲಿ ಗ್ರಾಹಕರು ವಿವಿಧ ಬಗೆಯ ಪೇಸ್ಟ್ರೀ, ಕೇಕ್ ಗಳನ್ನು ಪಡೆಯಬಹುದಾಗಿದ್ದು, ಇವರದ್ದೇ ಸ್ವಂತ ಬೇಕರಿ ಉತ್ಪನ್ನ ಘಟಕ ಹೊಂದಿದ್ದು. ಇಲ್ಲಿ ವೆಜ್, ಎಗ್, ಪನ್ನೀರ್ ಪಪ್ಸ್, ಸ್ವೀಟ್ ಪಪ್ಸ್, ಬ್ರೆಡ್, ಬನ್, ಕ್ರೀಮ್ ಬನ್, ದಿಲ್ ಖುಶ್, ಚಿರೋಟಿ ಮೊದಲಾದ ಉತ್ಪನ್ನಗಳನ್ನು ಇಲ್ಲೆ ತಯಾರಿಸಿ ಶುಚಿ ರುಚಿಯಾಗಿ ತಯಾರು ಮಾಡಿಕೊಡಲಾಗುತ್ತದೆ.

ಬೇಕ್ ಟ್ರೀಟ್ ಗ್ರಾಹಕರ ಅನುಕೂಲಕ್ಕಾಗಿ ಫ್ರೀ ಹೋಂ ಡೆಲಿವರಿ ಸೇವೆಯನ್ನು ನೀಡುತ್ತಿದ್ದು, ಉದ್ಯಾವರ ಮಾತ್ರವಲ್ಲದೆ ಮಣಿಪಾಲ, ಸಂತೆ ಕಟ್ಟೆ ವರೆಗೆ ಫ್ರೀ ಹೋಂ ಡೆಲಿವರಿ ಸೇವೆ ಲಭ್ಯವಿದೆ. ಹುಟ್ಟುಹಬ್ಬ, ವಿವಾಹ  ಇನ್ನಿತರ ಶುಭ ಸಮಾರಂಭಗಳಿಗೆ ಕೇಕ್ ಗಳನ್ನು ಗ್ರಾಹಕರ ಅಪೇಕ್ಷೆಯಂತೆ ತಯಾರು ಮಾಡಿಕೊಡಲಾಗುತ್ತದೆ.

ಸದ್ಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಬೇಕ್ ಟ್ರೀಟ್‍ನ ಉತ್ಪನ್ನಗಳಿಗೆ ಉತ್ತಮ ರೇಟಿಂಗ್ ಕೂಡಾ ಲಭ್ಯವಿದ್ದು, ಗೂಗಲ್ ನಲ್ಲಿ ನೀವು ಬೇಕ್ ಟ್ರೀಟ್ ಎಂದು ಹುಡುಕಿದರೆ ನಿಮಗೆ 4.6 ರೇಟಿಂಗ್ ಪಡೆದಿರುವು ಕಾಣಸಿಗುತ್ತದೆ.  

ಇದರೊಂದಿಗೆ ಬೇಕ್ ಟ್ರೀಟ್ ಮುಂದಿನ ದಿನಗಳಲ್ಲಿ ಚಾಟ್ಸ್ ನ್ನು ಗ್ರಾಹಕರಿಗಾಗಿ ಆರಂಭಿಸುವ ಉದ್ದೇಶವನ್ನೂ ಹೊಂದಿದೆ.
ಇನ್ನು ಬೇಕ್ ಟ್ರೀಟ್‍ನ ಉತ್ಪನ್ನಗಳನ್ನು ನೀವು ಸವಿಯಬೇಕೆಂದಿದ್ದರೆ ಕೂಡಲೇ 8296930966, 9980109265 ನಂಬರ್‍ಗೆ ಕರೆ ಮಾಡಿ ನಿಮ್ಮ ಆರ್ಡರ್ ನ್ನು ಖಚಿತಪಡಿಸಿಕೊಳ್ಳಿ ಹಾಗೂ ನಿಮ್ಮ ಸಂಭ್ರದ ಕ್ಷಣಗಳನ್ನು ಬೇಕ್ ಟ್ರೀಟ್‍ನ ಉತ್ಪನ್ನಗಳೊಂದಿಗೆ ಮತ್ತಷ್ಟು ಆನಂದದಿಂದ ಆಚರಿಸಿ.

Leave a Reply

Your email address will not be published. Required fields are marked *

error: Content is protected !!